ಕುಂಬಳೆಯಲ್ಲಿ ನ್ಯಾಯವಾದಿಯ ಆತ್ಮಹತ್ಯೆ: ಆರೋಪಿ ಪರವಾಗಿ ನ್ಯಾಯಾಲಯದಲ್ಲಿ ಹಾಜರಾದ ನ್ಯಾಯವಾದಿಯನ್ನು ಸಿಪಿಎಂ ವಕೀಲರ ಸಂಘಟನೆಯಿಂದ ಅಮಾನತು

ಕುಂಬಳೆ: ಕುಂಬಳೆಯಲ್ಲಿ ಯುವ ನ್ಯಾಯವಾದಿಯ ಆತ್ಮಹತ್ಯೆಗೈಯ್ಯಲು  ನ್ಯಾಯವಾದಿಗಳ ಮಧ್ಯೆಗಿನ ಉದ್ಯೋಗ ಸ್ಪರ್ಧೆಯೂ ಕಾರಣವಾಗಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಇದೇ ವೇಳೆ ಈ ಘಟನೆ ಸಿಪಿಎಂ- ಸಿಪಿಐ ಮಧ್ಯೆ ಸೌಹಾರ್ದ ತಿಕ್ಕಾಟ  ಕಾರಣವಾಗಿದೆ ಎಂಬ ಸೂಚನೆಯಿದೆ.

ಸಾಮಾಜಿಕ, ರಾಜಕೀಯ, ನ್ಯಾಯವಾದಿ ರಂಗಗಳಲ್ಲಿ ರಂಜಿತ ಬಹಳ ಬೇಗನೆ ಗಮನ ಸೆಳೆಯಲ್ಪಟ್ಟಿ ದ್ದರು. ಸಿಪಿಎಂ ಹಾಗೂ ಪಕ್ಷದ ವಿವಿಧ ಪೋಷಕ ಸಂಘಟನೆಗಳಲ್ಲೂ ಪ್ರಧಾನ ಹೊಣೆಗಾರಿಕೆ ವಹಿಸುತ್ತಿದ್ದರು. ಸಿಪಿಎಂ ನ್ಯಾಯವಾದಿಗಳ ಸಂಘಟನೆಯ ಜಿಲ್ಲಾ ಕೋಶಾಧಿಕಾರಿಯಾಗಿದ್ದರು.

ಸಿಪಿಐ ಬೆಂಬಲಿಗನೂ, ನ್ಯಾಯವಾದಿಯೂ ಆಗಿರುವ ಅನಿಲ್ ಕುಮಾರ್‌ರೊಂದಿಗೆ ರಂಜಿತ  ಕುಂಬಳೆಯಲ್ಲಿ ನ್ಯಾಯವಾದಿ ಕಚೇರಿ ಆರಂಭಿಸಿದ್ದರು. ಬೇರೊಂದು ಕೆಲಸದಲ್ಲಿ ತೊಡಗಿಕೊಂಡಿದ್ದ ಅನಿಲ್ ಕುಮಾರ್ ವಾರದಲ್ಲಿ ಎರಡು ದಿನ ಮಾತ್ರವೇ ನ್ಯಾಯವಾದಿ ಕಚೇರಿಗೆ ಬರುತ್ತಿದ್ದರು. ಇತರ ದಿನಗಳಲ್ಲಿ ಇವರ ಕೇಸುಗಳಿಗೆ ನ್ಯಾಯಾಲಯದಲ್ಲಿ ಹಾಜರಾಗುತ್ತಿ ದ್ದುದು ರಂಜಿತ ಆಗಿದ್ದರು. ಹೆಚ್ಚು ಕೇಸುಗಳಿದ್ದ ದಿನಗಳಲ್ಲಿ ಈ ಇಬ್ಬರ ಸ್ನೇಹಿತನಾಗಿರುವ ನ್ಯಾಯವಾದಿ ಸುಭಾಷ್ ಬೋಸ್ ರಂಜಿತರಿಗೆ ಸಹಾಯವೊದಗಿಸುತ್ತಿದ್ದರೆಂದು ಹೇಳಲಾಗುತ್ತಿದೆ. ಈ ಸ್ನೇಹವೇ ಪ್ರಕರಣದಲ್ಲಿ ಆರೋಪಿಯಾದ ಅನಿಲ್ ಕುಮಾರ್‌ಗೆ ಜಾಮೀನಿಗಾಗಿ ನ್ಯಾಯಾಲಯದಲ್ಲಿ ಹಾಜರಾಗಲು ಸುಭಾಷ್ ಬೋಸ್ ಮುಂದಾಗಿ ದ್ದರೆಂದು ಹೇಳಲಾಗುತ್ತಿದೆ. ಇದರ ಹೆಸರಲ್ಲಿ ಸಿಪಿಎಂ ನ್ಯಾಯವಾದಿಗಳ ಸಂಘಟನೆ ಯ ಜಿಲ್ಲಾ ಸಮಿತಿ ಸದಸ್ಯನಾದ ನ್ಯಾಯವಾದಿ ಸುಭಾಷ್ ಬೋಸ್‌ರನ್ನು ಕಳೆದ ದಿನ ನಡೆದ ಸಂಘಟನೆಯ ತುರ್ತು ಸಭೆ ಆರು ತಿಂಗಳಿಗೆ ಸಂಘಟನೆ ಯಿಂದ ಅಮಾನತುಗೊಳಿಸಿದೆ. ಆದರೆ ಈ ಘಟನೆ ಸಿಪಿಐಯೊಂದಿಗಿನ ಸೌಹಾರ್ದ ತಿಕ್ಕಾಟಕ್ಕೆ ದಾರಿ ಮಾಡಿಕೊಟ್ಟಿದೆ ಎಂದು ಹೇಳಲಾಗುತ್ತಿದೆ.

ಇತ್ತೀಚೆಗೆ ನಡೆದ ಕಾಸರಗೋಡು ಬಾರ್ ಅಸೋಸಿಯೇಶನ್ ಚುನಾವಣೆಯಲ್ಲಿ ಬಿಜೆಪಿ ಪ್ಯಾನೆಲ್ ವಿರುದ್ಧ ಸಿಪಿಐಯನ್ನು ಹೊರತುಪಡಿಸಿ ಸಿಪಿಎಂ ಇಂಡ್ಯ ಒಕ್ಕೂಟ ರೂಪೀಕರಿಸಿತ್ತು. ಕಾಂಗ್ರೆಸ್ ಹಾಗೂ ಮುಸ್ಲಿಂ ಲೀಗ್‌ನ್ನು ಸೇರಿಸಿ ಈ ಒಕ್ಕೂಟ ರಚಿಸಲಾಗಿತ್ತು. ಇಂಡ್ಯ ಒಕ್ಕೂಟ ರಚನೆಯಾಗುವು ದರೊಂದಿಗೆ ಕಾಂಗ್ರೆಸ್‌ನ ವಕೀಲರ ಸಂಘಟನೆಯಲ್ಲಿ ಭಿನ್ನಮತ ವುಂಟಾಯಿತು. ಸಿಪಿಐ ಆರಂಭ ಹಂತದಲ್ಲಿ ಚುನಾವಣೆ ಚಟುವಟಿಕೆಯಿಂದ ಬಿಟ್ಟು ನಿಂತಿದ್ದರೂ ಅನಂತರ ಅಸೋಸಿಯೇಶನ್ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಆಯ್ಕೆಗೊಳ್ಳಕೂಡದೆಂಬ ನಿಲುವು ಕೈಗೊಂಡಿತು. ಇಂಡ್ಯ ಒಕ್ಕೂಟದ ಅಧ್ಯಕ್ಷ ಅಭ್ಯರ್ಥಿ ಎ. ಗೋಪಾಲನ್ ನಾಯಕ್‌ರಿಗೆ ಅವರು ಮತ ಚಲಾಯಿಸಿದ್ದು ಇದರಿಂದ ಒಂದು ಮತದ ಅಂತರದಲ್ಲಿ ಅವರು ಗೆಲುವು ಸಾಧಿಸಿದರು. ಈ ಗೆಲುವು -ಸೋಲು ಈಗಲೂ ಚರ್ಚಾ ವಿಷಯವಾಗಿದೆ. ಆದರೆ ಚುನಾವಣೆ ಬಳಿಕ ಸಿಪಿಎಂ, ಇತರ ಇಂಡ್ಯ ಒಕ್ಕೂಟದ ಅಭ್ಯರ್ಥಿಗಳ ಸೋಲಿನ ಹೊಣೆಗಾರಿಕೆಯನ್ನು ಸಿಪಿಐಯ ತಲೆ ಮೇಲೆ ಹೊರಿಸಲು ಪ್ರಯತ್ನಿಸಿ ರುವುದಾಗಿಯೂ ಹೇಳಲಾಗುತ್ತಿದೆ. ಈ ಯತ್ನ ಎರಡೂ ಪಕ್ಷಗಳ ಮಧ್ಯೆ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿದೆ. ಸುಭಾಷ್ ಬೋಸ್‌ರನ್ನು ಸಂಘಟನೆಯ ನೇತೃತ್ವದಿಂದ ಹೊರ ಹಾಕಿರುವುದು ಮೂಲ ಸಮಸ್ಯೆಗಳಿಂದ ಗಮನವನ್ನೂ ಬೇರೆಡೆಗೆ ಹರಿಸಲಿರುವ ಉಪಾಯ  ವಾಗಿಯೂ ನ್ಯಾಯವಾದಿಗಳ ಮಧ್ಯೆ ಮಾತುಗಳು ಕೇಳಿ ಬರುತ್ತಿದೆ.

RELATED NEWS
ಬದಿಯಡ್ಕದಲ್ಲಿ ಹಸಿರು ಕ್ರಿಯಾಸೇನೆಯಲ್ಲೂ ವಂಚನೆ: 4,000 ರೂ. ಯೂಸರ್ ಫೀಸ್ ಬ್ಯಾಂಕ್‌ನಲ್ಲಿ ಪಾವತಿಸಿ ಪಂ. ಕಚೇರಿಯಲ್ಲಿ ನೀಡಿದ ರಶೀದಿಯಲ್ಲಿ 40,000 ವಾಗಿ ತಿದ್ದುಪಡಿ; ಮಹಿಳಾ ಅಸೋಸಿಯೇಶನ್ ವಿಲ್ಲೇಜ್ ಅಧ್ಯಕ್ಷೆ ಸಹಿತ ಇಬ್ಬರನ್ನು ಕೆಲಸದಿಂದ ತೆರವು

You cannot copy contents of this page