ಸೀತಾಂಗೋಳಿಯಲ್ಲಿ ಯುವಕನನ್ನು ಇರಿದು ಕೊಲೆಗೈಯ್ಯಲೆತ್ನಿಸಿದ ಪ್ರಕರಣ: ಮತ್ತೆ ನಾಲ್ವರು ಆರೋಪಿಗಳ ಬಂಧನ

ಕುಂಬಳೆ: ಅಕ್ಟೋಬರ್ 5ರಂದು ರಾತ್ರಿ ಸೀತಾಂಗೋಳಿ ಬಳಿ ಬದಿಯಡ್ಕ ನಿವಾಸಿ ಹಾಗೂ ಮೀನು ಮಾರಾಟಗಾರ ಅನಿಲ್ ಕುಮಾರ್ (40) ಎಂಬವರನ್ನು ಇರಿದು ಕೊಲೆಗೈಯ್ಯಲೆತ್ನಿಸಿದ ಪ್ರಕರಣದ ನಾಲ್ವರು ಆರೋಪಿಗಳು ನಿನ್ನೆ ಕುಂಬಳೆ ಪೊಲೀಸ್ ಠಾಣೆಯಲ್ಲಿ  ನೇರವಾಗಿ ಪೊಲೀಸರ ಮುಂದೆ ಶರಣಾಗಿದ್ದಾರೆ. ಬಳಿಕ ಪೊಲೀಸರು ಅವರನ್ನು ಬಂಧಿಸಿದ್ದಾರೆ.

ಬದಿಯಡ್ಕ ಕುದ್ರೆಪ್ಪಾಡಿ ನಿವಾಸಿಗಳಾದ ಮಹೇಶ್, ರಜೀಶ್ ಅಲಿಯಾಸ್ ಮೋಣು, ಅಜಿತ್ ಕುಮಾರ್ ಮತ್ತು ಹರಿಕೃಷ್ಣನ್‌ಎಂಬವರು ಬಂಧಿತರಾದ ಆರೋಪಿಗಳು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ವಿ. ವಿಜಯ್ ಭರತ್ ರೆಡ್ಡಿಯವರ ನಿರ್ದೇಶ ಪ್ರಕಾರ ಕಾಸರಗೋಡು ಎಎಸ್‌ಪಿ ಎಂ. ನಂದಗೋಪಾಲನ್ ನೇತೃತ್ವದಲ್ಲಿ ಕುಂಬಳೆ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಪಿ.ಜಿ. ಜಿಜೇಶ್, ಡ್ಯಾನ್‌ಸಾಫ್ ತಂಡದ ಸದಸ್ಯರುಗ ಳಾದ ಎಸ್‌ಐ ಕೆ. ನಾರಾಯಣನ್ ನಾಯರ್, ಎ.ಎಸ್.ಐ ಸಿ.ಎ. ಶಾಜು, ಎಸ್‌ಸಿಪಿಒ ಎನ್. ರಾಜೇಶ್ ಮತ್ತು ಸಿಪಿಒ  ಸಜೀಶ್ ಎಂಬಿವರ ನ್ನೊಳ ಗೊಂಡ ಪೊಲೀಸರ ತಂಡ ಈ ಆರೋಪಿಗಳನ್ನು ಬಂಧಿಸಿದೆ.

ಈ ಪ್ರಕರಣದ ಆರೋಪಿಗಳ ಪತ್ತೆಗಾಗಿ ಪೊಲೀಸರು ವ್ಯಾಪಕ ಶೋಧ ಆರಂಭಿಸಿದ್ದರು. ಇದರದಾಗಿ ಬಂಧನ ದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗದ ಸ್ಥಿತಿ ಆರೋಪಿಗಳಿಗೆ ಉಂಟಾಗಿತ್ತೆಂದೂ, ಅದರಿಂದಾಗಿ ಬೇರೆ ದಾರಿ ಕಾಣದೆ ಅವರು ನಿನ್ನೆ ನೇರವಾಗಿ ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.

ಇದೇ ಪ್ರಕರಣದ ಇನ್ನೋರ್ವ ಆರೋಪಿ ಬೇಳ  ಚೌಕಾರಿನ ಅಕ್ಷಯ್ (34) ಎಂಬಾತನನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಆತನಿಗೆ ಬಳಿಕ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಈ ಪ್ರಕರಣದಲ್ಲಿ ಒಟ್ಟು 13 ಮಂದಿ ಆರೋಪಿಗಳಿದ್ದಾರೆ. ಇತರ ಆರೋಪಿಗಳ ಪತ್ತೆಗಾಗಿರುವ ಶೋಧ ಕಾರ್ಯಾಚರಣೆಯನ್ನು ಪೊಲೀಸರು ಇನ್ನಷ್ಟು ತೀವ್ರಗೊಳಿಸಿದ್ದಾರೆ.

RELATED NEWS
ಬದಿಯಡ್ಕದಲ್ಲಿ ಹಸಿರು ಕ್ರಿಯಾಸೇನೆಯಲ್ಲೂ ವಂಚನೆ: 4,000 ರೂ. ಯೂಸರ್ ಫೀಸ್ ಬ್ಯಾಂಕ್‌ನಲ್ಲಿ ಪಾವತಿಸಿ ಪಂ. ಕಚೇರಿಯಲ್ಲಿ ನೀಡಿದ ರಶೀದಿಯಲ್ಲಿ 40,000 ವಾಗಿ ತಿದ್ದುಪಡಿ; ಮಹಿಳಾ ಅಸೋಸಿಯೇಶನ್ ವಿಲ್ಲೇಜ್ ಅಧ್ಯಕ್ಷೆ ಸಹಿತ ಇಬ್ಬರನ್ನು ಕೆಲಸದಿಂದ ತೆರವು

You cannot copy contents of this page