ಕನ್ನಡ ಮಾಧ್ಯಮ ಅಧ್ಯಾಪಕ ಸಂಘದಿಂದ ಕ್ಲಸ್ಟರ್ ಬಹಿಷ್ಕಾರ, ಮನವಿ ಸಲ್ಲಿಕೆ

ಉಪ್ಪಳ: ಕಾಸರಗೋಡಿನ ಭಾಷಾ ಅಲ್ಪಸಂಖ್ಯಾತ ಪ್ರದೇಶಗಳಲ್ಲಿನ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಸಾಂವಿಧಾನಿಕ ಮತ್ತು ಭಾಷಾ ಹಕ್ಕುಗಳನ್ನು ಮರಳಿ ಸ್ಥಾಪಿಸುವ ಉದ್ದೇಶದಿಂದ ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ನೇತೃತ್ವದಲ್ಲಿ ಕ್ಲಸ್ಟರ್ ಬಹಿಷ್ಕಾರ ನಡೆಸಲಾಯಿತು. ಬಳಿಕ ಮಂಜೇಶ್ವರ ಉಪಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಉಪಜಿಲ್ಲಾ ಕಚೇರಿಗೆ ಭೇಟಿ ನೀಡಿ ಶಿಕ್ಷಕರ ಕೈಪಿಡಿಗಳನ್ನು ಒದಗಿಸಬೇಕು, ವಿಜ್ಞಾನೋತ್ಸವ ಮತ್ತು ಕಲೋತ್ಸವಗಳಲ್ಲಿ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೂ ಸಮಾನ ಅವಕಾಶಗಳನ್ನು ನೀಡಬೇಕು, ಭಾಷಾ ಅಲ್ಪಸಂಖ್ಯಾತರ ಹಕ್ಕುಗಳನ್ನು ಸಂರಕ್ಷಣೆ ಮಾಡಬೇಕು, ದ್ವಿ ಭಾಷಾ ಸಂವಹನ ನೀತಿ ಜಾರಿಯಾಗಬೇಕು ಎಂಬ ಬೇಡಿಕೆಯನ್ನೊಳಗೊಂಡ ಮನವಿಯನ್ನು ಉಪಜಿಲ್ಲಾ ವಿದ್ಯಾಧಿಕಾರಿಗೆ ನೀಡಲಾಯಿತು. ಉಪಜಿಲ್ಲಾ ಅಧ್ಯಕ್ಷ ಅಶೋಕ್ ಕೊಡ್ಲಮೊಗರು, ಕೇಂದ್ರ ಸಮಿತಿ ಅಧ್ಯಕ್ಷ ಸುಕೇಶ್, ಉಪಜಿಲ್ಲಾ ಕಾರ್ಯದರ್ಶಿ ಸುನಿಲ್, ಪದಾಧಿ ಕಾರಿಗಳಾದ ಜೀವನ್, ಕಿಶೋರ್, ರೂಪೇಶ್,ದಿವಾಕರ ಬಲ್ಲಾಳï, ಜಯರಾಮ, ನೀತ ತಂಡದಲ್ಲಿದ್ದರು

RELATED NEWS

You cannot copy contents of this page