ಜಿಲ್ಲಾ ಶಾಲಾ ಕ್ರೀಡಾ ಮೇಳ: ತಿರುವನಂತಪುರ ಜಿಲ್ಲೆಯ ನಾಗಾಲೋಟ; ಈಜು ಸ್ಪರ್ಧೆಯಲ್ಲಿ 7 ದಾಖಲೆ

ತಿರುವನಂತಪುರ: ರಾಜ್ಯ ಶಾಲಾ ಕ್ರೀಡಾಕೂಟದಲ್ಲಿ 1287 ಅಂಕದೊAದಿಗೆ ತಿರುವನಂತಪುರ ಜಿಲ್ಲೆ ಚಾಂಪ್ಯನ್ ಪಟ್ಟದತ್ತ ಸಾಗುತ್ತಿದೆ. 146 ಚಿನ್ನ, 105 ಬೆಳ್ಳಿ, 126 ಕಂಚಿನ ಪದಕದೊಂದಿಗೆ ತಿರುವನಂತಪುರ ಜಿಲ್ಲೆ ಸಾಧನೆ ಮಾಡಿದೆ. ದ್ವಿತೀಯ ಸ್ಥಾನದಲ್ಲಿ ತೃಶೂರ್ (595 ಅಂಕ), ತೃತೀಯ ಸ್ಥಾನದಲ್ಲಿ ಪಾಲಕ್ಕಾಡ್ (541) ಅಂಕದೊAದಿಗೆ ಸೆಣಸಾಡುತ್ತಿದೆ. ಅಥ್ಲೆಟಿಕ್ಸ್ ಹೊರತಾಗಿ ಕ್ರೀಡಾ ಮೇಳದಲ್ಲಿ ತಿರುವನಂತಪುರ ತನ್ನ ಆದಿಪಥ್ಯವನ್ನು ಸ್ಥಾಪಿಸಿದೆ. ಗೇಮ್ಸ್ ವಿಭಾಗಗಳಲ್ಲಿ 727 ಅಂಕ (84 ಚಿನ್ನ, 51 ಬೆಳ್ಳಿ, 87 ಕಂಚು), ಈಜು ಸ್ಪರ್ಥೆಗಳಲ್ಲಿ 544 ಅಂಕ ಪಡೆದಿದ್ದು (61 ಚಿನ್ನ, 51 ಬೆಳ್ಳಿ, 37 ಕಂಚು) ತಿರುವನಂತಪುರ ಮುಂದಿದೆ. ಇದೇ ವೇಳೆ ಅಥ್ಲೆಟಿಕ್ಸ್ ಸ್ಪರ್ಧೆಯಲ್ಲಿ ತಿರುವನಂತಪುರ ಜಿಲ್ಲೆಗೆ 16 ಅಂಕ ಮಾತ್ರವೇ ಲಭಿಸಿದ್ದು, ಈ ವಿಭಾಗದಲ್ಲಿ 6ನೇ ಸ್ಥಾನದಲ್ಲಿದೆ.
ಈಜು ಚಾಂಪ್ಯನ್ಶಿಪ್ನಲ್ಲಿ ನಾಲ್ಕನೇ ದಿನ 7 ಮೀಟ್ ರೆಕಾರ್ಡ್ ಗಳು ದಾಖಲಾಗಿವೆ. ಇದರ ಜೊತೆಗೆ ಸಬ್ ಜ್ಯೂನಿಯರ್ ಹೆಣ್ಮಕ್ಕಳ 200 ಮೀಟರ್ ಬಟರ್ಫ್ಲೈಯಲ್ಲಿ ಮೊದಲ ಮೂರು ಸ್ಥಾನಗಳಿಗೆ ತಲುಪಿದವರು ಈಗಿರುವ ದಾಖಲೆ ಸಮಯನ್ನು ದಾಟಿ ಮುನ್ನಡೆದರು. ಸಬ್ ಜ್ಯೂನಿಯರ್ ಹೆಣ್ಮಕ್ಕಳ 50 ಮೀಟರ್ ಫ್ರೀ ಸ್ಟೈಲ್ನಲ್ಲಿ (29.63 ಸೆಕೆಂಡ್), ಬ್ಯಾಕ್ ಸ್ಟ್ರೋಕ್ನಲ್ಲಿ (34.60 ಸೆಕೆಂಡ್), ಎಸ್.ಎ ಆಜುಶಿ ಆವಂತಿಕ ಅವಳಿ ದಾಖಲೆ ಗಳಿಸಿ ಚಿನ್ನ ಪಡೆದರು. ಕುಂಡತ್ತಿಲ್ ಎಂವಿಎಚ್ಎಸ್ಎಸ್ನ ವಿದ್ಯಾರ್ಥಿನಿಯಾಗಿದ್ದಾಳೆ. ಸಬ್ ಜ್ಯೂನಿಯರ್ ಗಂಡು ಮಕ್ಕಳ 50 ಮೀಟರ್ ಫ್ರೀ ಸ್ಟೈಲ್ನಲ್ಲಿ ಕಳಮಶ್ಶೇರಿ ರಾಜಗಿರಿ ಹೈಸ್ಕೂಲ್ನ ಜೋಹನ್ ಜೂಲಿಯನ್. (27.18 ಸೆಕೆಂಡ್), ಜ್ಯೂನಿಯರ್ ಗಂಡು ಮಕ್ಕಳ ವೆಂಬಾಯ ನೆಡುವೇಲಿ ಸರಕಾರಿ ಎಚ್ಎಸ್ಎಸ್ನ ವಿ.ವಿ. ಶಾಲು (25.78 ಸೆಡೆಂಡ್) ದಾಖಲೆ ನಿರ್ಮಿಸಿದಾಗ ಜ್ಯೂನಿಯರ್ ಹೆಣ್ಣುಮಕ್ಕಳ ಫ್ರೀಸ್ಟೈಲ್ನಲ್ಲಿ ಆನೈಕಲ್ ಸರಕಾರಿ ಎಚ್ಎಸ್ಎಸ್ನ ಆರ್.ಎಸ್. ವೃಂದ ತನ್ನ ಹೆಸರಿನಲ್ಲಿದ್ದ ದಾಖಲೆಯನ್ನು ನವೀಕರಿಸಿದರು (29.21 ಸೆಕೆಂಡ್). ಸೀನಿಯರ್ ಹೆಣ್ಮಕ್ಕಳ 50 ಮೀಟರ್ ಬ್ಯಾಕ್ ಸ್ಟ್ರೋಕ್ನಲ್ಲಿ ಜಯಗಳಿಸಿದ ಕಲ್ಲಿಕೋಟೆ ಪ್ರೊವಿಡೆನ್ಸ್ ಗರ್ಲ್ಸ್ ಎಚ್ಎಸ್ಎಸ್ನ ಕೆ. ದೇವಿಕ (33.30 ಸೆಕೆಂಡ್), ಸಬ್ ಜ್ಯೂನಿಯರ್ ಹೆಣ್ಮಕ್ಕಳ 200 ಮೀಟರ್ ಬಟರ್ಫ್ಲೈಯಲ್ಲಿ ಚಿನ್ನ ಗಳಿಸಿದ ತೃಶೂರು ಚಂ ದ್ರಾಪಿನಿಎಚ್ಎಸ್ಎಸ್ನ ವಿ.ಎನ್. ನಿವೇದ್ಯ (2.52 ಮಿನಿಟ್) ಈಜು ಕೊಳದಲ್ಲಿ ಇತರ ದಾಖಲೆ ನಿರ್ಮಿಸಿದವರು. ಈಜು ಸ್ಪರ್ಧೆ ಇಂದು ಸಮಾಪ್ತಿಗೊಳ್ಳಲಿದೆ

ಅವಳಿ ದಾಖಲೆ ಸೃಷ್ಟಿಸಿದಸೋನ ನಂಬರ್ ವನ್
ತಿರುವನಂತಪುರ: ಜ್ಯೂನಿಯರ್ ಹೆಣ್ಮಕ್ಕಳ ಡಿಸ್ಕಸ್ ತ್ರೋದಲ್ಲಿ ಎರಡು ಬಾರಿ ದಾಖಲೆಯನ್ನು ನವೀಕರಿಸಿ ಕಾಸರಗೋಡು ಕುಟ್ಟಮತ್ ಜಿಎಚ್ಎಸ್ಎಸ್ನ ಟಿ. ಸೋನಮೋಹನ್ ಚಿನ್ನ ಗಳಿಸಿದ್ದಾರೆ. 2017ರಲ್ಲಿ ತೃಶೂರಿನ ಪಿ. ಅತುಲ್ಯ ಸ್ಥಾಪಿಸಿದ 37.49 ಮೀಟರ್ನ ದಾಖಲೆಯನ್ನು 38.64 ಮೀಟರ್ ಎಸೆದು ಸೋನ ಹಿಂದಿಕ್ಕಿದ್ದಾರೆ. ಮೊದಲ ಎರಡು ತ್ರೋದಲ್ಲಿ ಉದ್ದೇಶಿಸಿದ ದೂರ ಲಭ್ಯವಾಗದ ಹಿನ್ನೆಲೆಯಲ್ಲಿ ನಿರಾಶೆ ಹೊಂದಿದ್ದರು. ಆದರೆ ಮೂರನೇ ತ್ರೋದಲ್ಲಿ 37.93 ಮೀಟರ್ ದೂರ ಎಸೆದು ದಾಖಲೆ ತಿದ್ದಿದರು. ಕೊನೆಯ ಹಂತದಲ್ಲಿ ಈ ಸಾಧನೆಯನ್ನು ಸೋನ ತಿದ್ದುಪಡಿ ಮಾಡಿದ್ದಾರೆ. ಕಾಸರಗೋಡು ಚೆರುವತ್ತೂರು ಕೆ.ಸಿ. ತ್ರೋಸ್ ಅಕಾಡೆಮಿಯ ತರಬೇತುದಾರ ಕೆ.ಸಿ. ಗಿರೀಶ್ರಿಂದ ಸೋನ ತರಬೇತಿ ಪಡೆಯುತ್ತಿದ್ದಾರೆ. 40 ಮೀಟರ್ಗಿಂತ ಹೆಚ್ಚು ಎಸೆಯಬೇಕೆಂಬ ಆಸೆ ಹೊಂದಿದ ಸೋನರಿಗೆ ಅದನ್ನು ಪೂರೈಸಲು ಸಾಧ್ಯವಾಗದ ನೋವು ಇದೆ ಎಂದಿದ್ದಾರೆ. ಹವಾಮಾನ ತನ್ನ ಸಾಧನೆಗೆ ತೊಡಕಾಯಿತೆಂದು ಅವರು ನುಡಿಯುತ್ತಾರೆ. ಕಾಸರಗೋಡು ಕುಟ್ಟಮತ್ ಜಿಎಚ್ಎಸ್ಎಸ್ನ ಎನ್.ಎಸ್. ಕಾರ್ತಿಕ್ ಜ್ಯೂನಿಯರ್ ಗಂಡು ಮಕ್ಕಳ ಶಾಟ್ಪುಟ್ನಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ.

You cannot copy contents of this page