ತಿರುವನಂತಪುರ: ಕೇಂದ್ರ ಸರಕಾರದ ಪಿ.ಎಂ.ಶ್ರೀ ಯೋಜನೆಯ ಒಪ್ಪಂದ ಪತ್ರಕ್ಕೆ ರಾಜ್ಯ ಸರಕಾರ ಸಹಿ ಹಾಕಿದ ಹೆಸರಲ್ಲಿ ಎಡರಂಗದಲ್ಲಿ ಭುಗಿಲೆದ್ದ ವಿವಾದ ಈಗ ಸ್ಫೋಟಕ ಸ್ಥಿತಿಗೆ ತಲುಪುವಂತೆ ಮಾಡಿದೆ. ಸಚಿವ ಸಂಪುಟ ಸಭೆಯಲ್ಲಾಗಲಿ, ಎಡರಂಗ ಸಭೆಯಲ್ಲಾಗಲಿ ಸರಿಯಾದ ಚರ್ಚೆ ನಡೆಸದೆ ಪಿ.ಎಂ.ಶ್ರೀ ಯೋಜನೆಯ ಒಪ್ಪಂದ ಪತ್ರಕ್ಕೆ ರಾಜ್ಯ ಸರಕಾರ ಸಹಿ ಹಾಕಿತ್ತು. ಈ ಹಿನ್ನೆಲೆಯಲ್ಲಿ ಸಿಡಿದೆದ್ದ ಸಿಪಿಐ ಸರಕಾರದ ಅಂತಹ ಕ್ರಮದ ವಿರುದ್ಧ ರಂಗಕ್ಕಿಳಿದಿದೆ. ಈ ವಿಷಯದ ಬಗ್ಗೆ ಚರ್ಚಿಸಲು ನಿನ್ನೆ ಸಿಪಿಐ ಸೆಕ್ರೆಟರಿಯೇಟ್ ಸಭೆ ಕರೆಯಲಾಗಿತ್ತು. ಇದೇ ಸಂದರ್ಭದಲ್ಲಿ ಸರಕಾರದ ನಿಲುವನ್ನು ಪ್ರತಿಭಟಿಸಿ ಸಿಪಿಐ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. ಅಕ್ಟೋಬರ್ ೨೭ರಂದು ಆಲಪ್ಪುಳದಲ್ಲಿ ಸಿಪಿಐಯ ರಾಜ್ಯ ಕಾರ್ಯಕಾರಿ ಸಮಿತಿ ಸಭೆ ಕರೆಯಲಾ ಗಿದ್ದು, ಅದರಲ್ಲಿ ಸಿಪಿಐ ಈ ವಿಷಯದ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಲಿದೆ. ಅದರಲ್ಲಿ ಕೈಗೊಳ್ಳುವ ತೀರ್ಮಾನ ಎಡರಂಗಕ್ಕೆ ಸಂಬಂಧಿಸಿ ಅತ್ಯಂತ ನಿರ್ಣಾಯಕವಾಗಿರುವುದು.







