ಕುಂಬಳೆ: ಕುಂಬಳೆ ಪೇಟೆಯ ಇಬ್ಬರು ಗೂಡಂಗಡಿ ವ್ಯಾಪಾರಿಗಳು ನಿನ್ನೆ ಸಂಜೆ ಪರಸ್ಪರ ಹೊಡೆದಾಡಿ ಕೊಂಡ ಘಟನೆ ನಡೆದಿದೆ. ಈ ಸಂಬಂಧ ಆರಿಕ್ಕಾಡಿ ಕಡವತ್‌ನ ಅಬ್ದುಲ್ ಮರ್ಶಾದ್ (24), ಬಂಬ್ರಾಣದ ಸ್ವಸ್ತಿಕ್ ಶೆಟ್ಟಿ (19) ಎಂಬಿವರನ್ನು ಎಸ್‌ಐ ಪ್ರದೀಪ್ ಕುಮಾರ್ ನೇತೃತ್ವದ ಪೊಲೀಸರು ಸೆರೆಹಿಡಿದಿದ್ದಾರೆ. ಅಬ್ದುಲ್ ಮರ್ಶಾದ್ ಹಾಗೂ ಸ್ವಸ್ತಿಕ್ ಶೆಟ್ಟಿ ಕುಂಬಳೆ-ಬದಿಯಡ್ಕ ರಸ್ತೆಯಲ್ಲಿ ಗೂಡಂಗಡಿ ವ್ಯಾಪಾರಿಗಳಾಗಿದ್ದಾರೆ. ನಿನ್ನೆ ಸಂಜೆ ವಾಹನ ಪಾರ್ಕಿಂಗ್ ವ್ಯವಸ್ಥೆಯಲ್ಲಿ ಇವರೊಳಗೆ ತರ್ಕವುಂಟಾಗಿತ್ತೆನ್ನಲಾಗಿದೆ. ಬಳಿಕ ಇದು ಪರಸ್ಪರ ಹೊಡೆದಾಟದಲ್ಲಿ ಕೊನೆಗೊಂಡಿದೆ. ವಿಷಯ ತಿಳಿದು ತಕ್ಷಣ ಸ್ಥಳಕ್ಕೆ ತಲುಪಿದ ಪೊಲೀಸರು ಈ ಇಬ್ಬರನ್ನು ಬಂಧಿಸಿದ್ದಾರೆ.







