ಲೋಕಸಭಾ ಚುನಾವಣೆ: ಕಾಸರಗೋಡಿನಲ್ಲಿ ಸಿಪಿಎಂನ ಮೂವರ ಹೆಸರು ಪರಿಗಣನೆಯಲ್ಲಿ
ಕಾಸರಗೋಡು: ಲೋಕಸಭಾ ಚುನಾವಣೆಗೆ ಇನ್ನೇನು ತಿಂಗಳುಗಳು ಮಾತ್ರವೇ ಬಾಕಿ ಉಳಿದುಕೊಂಡಿ ರುವಂತೆಯೇ ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ ಉಮೇದ್ವಾರ ನಿರ್ಣಾಯದ ಬಗ್ಗೆ ಸಿಪಿಎಂನಲ್ಲಿ ಈಗ ಭರದ ಚರ್ಚೆ ಆರಂಭಗೊಂಡಿದೆ.
ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ ಕಾಸರಗೋಡು ಜಿಲ್ಲೆಯವರೇ ಆಗಿರುವ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಡಾ. ವಿಪಿಪಿ ಮುಸ್ತಫಾ, ಕಣ್ಣೂರು ಜಿಲ್ಲೆಯವರಾದ ಶಾಸಕಿ ಟಿ.ವಿ. ರಾಜೇಶ್ವರಿ ಮತ್ತು ಕಣ್ಣೂರು ಜಿಲ್ಲಾ ಪಂಚಾಯತ್ ಅಧಕ್ಷೆ ಪಿ.ಪಿ. ದಿವ್ಯಾ ಅವರ ಹೆಸರುಗಳನ್ನು ಪಕ್ಷ ಪ್ರಧಾನವಾಗಿ ಪರಿಗಣಿಸುತ್ತಿದೆ ಎನ್ನಲಾಗಿದೆ.
ಪಿ.ಪಿ. ದಿವ್ಯಾರ ಹೆಸರನ್ನೂ ಕಣ್ಣೂರು ಲೋಕಸಭಾ ಕ್ಷೇತ್ರಕ್ಕೂ ಇದೇ ಸಂದರ್ಭದಲ್ಲಿ ಸಿಪಿಎಂ ಇನ್ನೊಂದೆಡೆ ಪರಿಗಣಿಸತೊಡಗಿದೆ. ಹಲವು ವರ್ಷಗಳಿಂದ ತನ್ನ ಪರಂಪರಾಗತ ಲೋಕಸಭಾ ಕ್ಷೇತ್ರವಾಗಿದ್ದ ಕಾಸರಗೋಡಿನಲ್ಲಿ ಕಳೆದ ಚುನಾವಣೆಯಲ್ಲಿ ಸಿಪಿಎಂಗೆ ಅನಿರೀಕ್ಷಿತ ಸೋಲು ಅನುಭವಿಸಬೇಕಾಗಿ ಬಂದಿತ್ತು. ಹಲವು ವರ್ಷಗಳಿಂದ ನಿರಂತರವಾಗಿ ಸೋಲು ಅನುಭವಿ ಸುತ್ತಾ ಬಂದಿದ್ದ ಕಾಂಗ್ರೆಸ್ ಗೆ ಕಳೆದಬಾರಿ ಅನಿರೀಕ್ಷಿ ತವಾಗಿ ಗೆಲುವು ಉಂಟಾಗಿತ್ತು. ಇದು ಎಡರಂಗದ ಪಾಳಯಕ್ಕೆ ಭಾರೀ ಆಘಾತವುಂಟುಮಾಡಿತ್ತು. ಅದರಿಂದ ಈ ಬಾರಿ ಹೊರಬರಲು ಸಿಪಿಎಂ ಅಗತ್ಯದ ಕಸರತ್ತುಗಳಲ್ಲಿ ಈಗಾಗಲೇ ತೊಡಗಿದೆ.