ಕಾಸರಗೋಡು: ಸಿನಿಮಾದಲ್ಲಿ ಅವಕಾಶವೊದಗಿಸುವುದಾಗಿ ತಿಳಿಸಿ ಬಾಲಕಿಯ ನಗ್ನ ಚಿತ್ರಗಳನ್ನು ಕೇಳಿದ ಯುವಕ ಸೆರೆಗೀಡಾಗಿದ್ದಾನೆ. ಕಾಸ ರಗೋಡು ಕಾಟಿಪಳ್ಳ ನಾರಾಯಣೀ ಯಂನ ಶಿಬಿನ್ (29) ಎಂಬಾತನನ್ನು ಕಲ್ಲಿಕೋಟೆ ಬೇಪೂರು ಪೊಲೀಸರು ಪೋಕ್ಸೋ ಪ್ರಕಾರ ಬಂಧಿಸಿದ್ದಾರೆ. ಬೇಪೂರು ನಿವಾಸಿಯಾದ 10ನೇ ತರಗತಿ ವಿದ್ಯಾರ್ಥಿನಿಯೊಂದಿಗೆ ತಾನು ಸಿನಿಮಾ ನಿರ್ದೇಶಕನೆಂದು ತಿಳಿಸಿ ಆರೋಪಿ ಸಿನಿಮಾದಲ್ಲಿ ಅಭಿನ ಯಿಸಲು ಅವಕಾಶ ಒದಗಿಸುವು ದಾಗಿಯೂ ಅದಕ್ಕಾಗಿ ನಗ್ನ ಫೋಟೋಗಳನ್ನು ನೀಡುವಂತೆ ತಿಳಿಸಿ ಬಾಲಕಿಗೆ ಫೋನ್ ಕರೆ ಮಾಡಿ ವಾಟ್ಸಪ್ ಮೂಲಕ ಸಂದೇಶ ಕಳುಹಿಸಿದ್ದಾನೆನ್ನಲಾಗಿದೆ. ಈ ಬಗ್ಗೆ ಬಾಲಕಿ ಬೇಪೂರು ಪೊಲೀಸರಿಗೆ ದೂರು ನೀಡಿದ್ದಳು. ಇದರಂತೆ ಕೇಸು ದಾಖಲಿಸಿಕೊಂಡ ಪೊಲೀಸರು ಸೈಬರ್ ಸೆಲ್‌ನ ಸಹಾಯದೊಂದಿಗೆ ನಡೆಸಿದ ತನಿಖೆಯಲ್ಲಿ ಆರೋಪಿಯ ನ್ನು ಪತ್ತೆಹಚ್ಚಿ ಬಂಧಿಸಲಾಗಿದೆ. ಬೇಪೂರು ಎಸ್‌ಐ ಅಂಗಜನ್, ಸಿಪಿಒ ಸರೂಣ್, ಫರೋಕ್ ಎಸಿಸ್ಪಿ ಸ್ಕ್ವಾಡ್ ಸದಸ್ಯರಾದ ಎಎಸ್‌ಐ ಅರುಣ್, ಎಸ್‌ಸಿಪಿಒ ವಿನೋದ್ ಎಂಬಿವರು ಒಳಗೊಂಡ ತಂಡ ಆರೋಪಿಯನ್ನು ಬಂಧಿಸಿದೆ.







