ಪನಯಾಲ್ ನಿವಾಸಿಯ 8 ಲಕ್ಷ ರೂ. ಲಪಟಾವಣೆ: ವೀಸಾ ವಂಚನೆ ಆರೋಪಿ ವಿರುದ್ಧ ಬೇಕಲ ಠಾಣೆಯಲ್ಲೂ ಕೇಸು

ಕಾಸರಗೋಡು: ವೀಸಾ ಭರವಸೆಯೊಡ್ಡಿ ಹಲವರಿಂದ ಲಕ್ಷಾಂತರ ರೂಪಾಯಿ ಪಡೆದು ವಂಚಿಸಿದ ಪ್ರಕರಣದಲ್ಲಿ ಸೆರೆಗೀಡಾದ ನೀಲೇಶ್ವರ ಚಿರಪ್ಪುರಂ ಪಾಲಕ್ಕಾಟ್‌ನ ಉಲ್ಲಾಸ್ ಕುಞಂಬು (40) ಎಂಬಾತನ ವಿರುದ್ಧ ಬೇಕಲ ಪೊಲೀಸ್ ಠಾಣೆಯಲ್ಲೂ ಕೇಸು ದಾಖಲಿಸಲಾಗಿದೆ. ಪನಯಾಲ್ ದೇವನ್‌ಪೊಡಿಚ್ಚಪ್ಪಾರದ ಎಂ. ಗೋಪ ಕುಮಾರ್ ನೀಡಿದ ದೂರಿನಂತೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಫಿನ್‌ಲ್ಯಾಂಡ್ ವೀಸಾ ನೀಡುವುದಾಗಿ ತಿಳಿಸಿ ಹಲವು ಬಾರಿಯಾಗಿ 8 ಲಕ್ಷ ರೂಪಾಯಿಗಳನ್ನು ಪಡೆದು ವಂಚಿಸಿರುವುದಾಗಿ ಗೋಪ ಕುಮಾರ್ ಆರೋಪಿಸಿದ್ದಾರೆ. 2023 ಸೆಪ್ಟಂಬರ್‌ನಿಂದ ಹಲವು ಬಾರಿಯಾಗಿ ಬ್ಯಾಂಕ್ ಖಾತೆ   ಹಾಗೂ ಗೂಗಲ್ ಪೇ ಮೂಲಕ ಹಣ ನೀಡಲಾಗಿದೆ. ಆದರೆ ವೀಸಾ ಅಥವಾ ಹಣವನ್ನು ಮರಳಿಸದ ಹಿನ್ನೆಲೆಯಲ್ಲಿ ಪೊಲೀಸರಿಗೆ ದೂರು ನೀಡಲಾಗಿದೆ.

ಉಲ್ಲಾಸ್ ವಿರುದ್ಧ ಚಿಟ್ಟಾರಿಕಲ್, ವೆಳ್ಳರಿಕುಂಡ್, ನೀಲೇಶ್ವರ ಪೊಲೀಸ್ ಠಾಣೆಗಳಲ್ಲೂ ವೀಸಾ ವಂಚನೆ ಕೇಸುಗಳು ದಾಖಲಾಗಿವೆ. ವೀಸಾ ವಂಚನೆ ನಡೆಸಿದ ಹಣದೊಂದಿಗೆ ಕುಟುಂಬ ಸಮೇತ ಫಿನ್‌ಲ್ಯಾಂಡ್‌ಗೆ ಪರಾರಿಯಾದ ಉಲ್ಲಾಸ್ ವಿರುದ್ಧ ಚಿಟ್ಟಾರಿಕಲ್ ಪೊಲೀಸರು ಲುಕೌಟ್ ನೋಟೀಸ್ ಹೊರಡಿಸಿದ್ದರು. ಇತ್ತೀಚೆಗೆ ಫಿನ್ ಲ್ಯಾಂಡ್‌ನಿಂದ ಮರಳಿ ಬೆಂಗಳೂರು ವಿಮಾನ ನಿಲ್ದಾಣಕ್ಕೆ ತಲುಪಿದಾಗ ಲುಕೌಟ್ ನೋಟೀಸ್ ಪ್ರಕಾರ ಉಲ್ಲಾಸ್‌ನನ್ನು ವಿಮಾನ ನಿಲ್ದಾಣದಲ್ಲಿ ತಡೆದು ನಿಲ್ಲಿಸಲಾಯಿತು. ವಿಷಯ ತಿಳಿದು ಬೆಂಗಳೂರಿಗೆ ತಲುಪಿದ ಚಿಟ್ಟಾರಿಕಲ್ ಪೊಲೀಸರು ಆರೋಪಿ ಯನ್ನು ಊರಿಗೆ ತಲುಪಿಸಿ ತನಿಖೆಗೊಳ ಪಡಿಸಿದಾಗ ಹಲವು ವೀಸಾ ವಂಚನೆ ಪ್ರಕರಣದ ಆರೋಪಿಯಾಗಿ ದ್ದಾನೆಂದು ತಿಳಿದು ಬಂದಿರುವುದಾಗಿ ಪ್ರಕರಣದ ತನಿಖೆ ನಡೆಸುವ ಚಿಟ್ಟಾರಿ ಕಲ್ ಎಸ್‌ಐ ಮಧುಸೂದನನ್ ಮಡಿಕೈ ತಿಳಿಸಿದ್ದಾರೆ.

You cannot copy contents of this page