ಮುಳ್ಳೇರಿಯ: ಕುಂಟಾರು ಶ್ರೀ ಅಯ್ಯಪ್ಪ ಭಜನಾ ಮಂದಿರದ ಗುರು ಸ್ವಾಮಿ, ಜಗತ್ತಾಪ್ ಮನೆತನದ ಎಲಿಕ್ಕಳ ದೇವರ ಮನೆಯ ಹಿರಿಯ ರಾದ ಯಾದವ ರಾವ್(68) ನಿನ್ನೆ ನಿಧನರಾದರು. ಅನಾರೋಗ್ಯ ತಗಲಿ ಚಿಕಿತೆ್ಸಯಲ್ಲಿ ದ್ದರು. ಆದೂರು ಗೇರು ಸಂತತಿ ತೋಟದ ಕಾರ್ಮಿಕರಾಗಿ ನಿವೃತ್ತರಾದ ಇವರು ಗಣೇಶ ವಿಗ್ರಹ ತಯಾರಿಯಲ್ಲಿ ನಿಷ್ಣಾತರೂ, ಯಕ್ಷ ಗಾನ ಕಲಾವಿದರೂ ಆಗಿದ್ದರು. 30 ಬಾರಿ ಶ್ರೀ ಶಬರಿಮಲೆ ಯಾತ್ರೆ ಕೈಗೊಂಡಿ ದ್ದರು. ಪತ್ನಿ ವಿಮಲ, ಮಕ್ಕಳಾದ ನಯನ, ಕವಿತ, ಅಳಿಯ ಗಿರಿಪ್ರಸಾದ್, ಸೊಸೆ ದಿವ್ಯಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.







