ಮಾದಕದ್ರವ್ಯ ಸಾಗಾಟ ಪ್ರಕರಣ :ಆರೋಪಿಗೆ ಎರಡು ವರ್ಷ ಸಜೆ, ಜುಲ್ಮಾನೆ

ಕಾಸರಗೋಡು: ಕಾರಿನಲ್ಲಿ ಮಾದಕ ದ್ರವ್ಯ ಸಾಗಿಸಿದ ಪ್ರಕರಣದ ಆರೋಪಿಗೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ (ದ್ವಿತೀಯ)ದ ನ್ಯಾಯಾಧೀಶೆ ಕೆ. ಪ್ರಿಯಾ ಅವರು ಎರಡು ವರ್ಷ ಮೂರು ತಿಂಗಳ ಕಠಿಣ ಸಜೆ ಹಾಗೂ ೨೫,೦೦೦ ರೂ. ಜುಲ್ಮಾನೆ ವಿಧಿಸಿ ತೀರ್ಪು ನೀಡಿದ್ದಾರೆ.

ಕಣ್ಣೂರು ಮುಳಪ್ಪಿಲಂಗಾಡ್ ಕುಳಂ ಬಜಾರಿನ ರುಹೈಬ್ ಸಿ.ವಿ.(35)  ಎಂಬಾತನಿಗೆ ಈ ಶಿಕ್ಷೆ ವಿಧಿಸಲಾಗಿದೆ. ಜುಲ್ಮಾನೆ ಪಾವತಿಸದಿದ್ದಲ್ಲಿ ಆರೋಪಿ ನಾಲ್ಕು ತಿಂಗಳ ಹೆಚ್ಚುವರಿ ಸಜೆ ಅನುಭವಿಸಬೇ ಕಾಗಿದೆ ಎಂದು ತೀರ್ಪಿನಲ್ಲಿ ತಿಳಿಸಲಾಗಿದೆ. 2019 ಸೆಪ್ಟಂಬರ್ 6ರಂದು ರಾತ್ರಿ ಮುಳ್ಳೇರಿಯ- ಜಾಲ್ಸೂರು ಅಂತಾ ರಾಜ್ಯ ಹೆದ್ದಾರಿಯ ಕುಂಟಾರು ಬಸ್ ತಂಗುದಾಣದ ಬಳಿ ಬದಿಯಡ್ಕ ಎಕ್ಸೈಸ್ ರೇಂಜ್ ಇನ್ಸ್‌ಪೆಕ್ಟರ್ ಎಸ್. ಸಮೀರ್‌ರ ನೇತೃತ್ವದ ಅಬಕಾರಿ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ಕಾರಿನಲ್ಲಿ ಸಾಗಿಸುತ್ತಿದ್ದ 18 ಗ್ರಾಂ ಎಂಡಿಎಂಎ ಮತ್ತು ೧೧ ಗ್ರಾಂ ನಿಷೇಧಿತ ನಿಟ್ರೊಸೆಪಾಂ ಟಾಬ್ಲೆಟ್ಸ್‌ಗಳನ್ನು ವಶಪಡಿಸಿಕೊಂಡಿದ್ದರು. ಅದಕ್ಕೆ ಸಂಬಂಧಿಸಿ ಆ ಕಾರಿನಲ್ಲಿದ್ದ ರುಹೈಬ್‌ನನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದರು. ನಂತರ ಈ ಪ್ರಕರಣದ ಮುಂದಿನ ತನಿಖೆಯನ್ನು ಕಾಸರಗೋಡು ಅಸಿಸ್ಟೆಂಟ್ ಎಕ್ಸೈಸ್ ಕಮಿಷನರ್‌ಗಳಾದ ವಿನೋದ್ ಬಿ. ನಾಯರ್ ಮತ್ತು ಡಿ. ಬಾಲಚಂದ್ರನ್ ನಡೆಸಿ ನ್ಯಾಯಾಲಯಕ್ಕೆ ದೋಷಾ ರೋಪ ಪಟ್ಟಿ ಸಲ್ಲಿಸಿದ್ದರು. ಆ ಪ್ರಕರಣ ದಲ್ಲಿ ಆರೋಪಿಗೆ ಈ ಶಿಕ್ಷೆ ವಿಧಿಸಲಾ ಗಿದೆ. ಎರಡನೇ ಆರೋಪಿ ಖನ್ಸುಲ್ ಹಖ್ ಇನ್ನೂ ತಲೆಮರೆಸಿಕೊಂಡಿದ್ದಾನೆ. ಪ್ರೋಸಿಕ್ಯೂಷನ್ ಪರ ಹೆಚ್ಚುವರಿ ಸರಕಾರಿ ಪ್ಲೀಡರ್ ಜಿ. ಚಂದ್ರಮೋಹನ್ ಮತ್ತು ಚಿತ್ರಕಲ ನ್ಯಾಯಾಲಯದಲ್ಲಿ ವಾದಿಸಿದ್ದರು.

You cannot copy contents of this page