ಮುಳಿಯಾರು ನಿವಾಸಿ ಯುವಕ ಬೆಹ್ರೈನ್‌ನಲ್ಲಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ

ಬೋವಿಕ್ಕಾನ: ಮುಳಿಯಾರು ಅಮ್ಮಂಗೋಡು ನಿವಾಸಿಯಾಗಿರುವ ಯುವಕ ಬೆಹ್ರೈನ್‌ನ ವಾಸಸ್ಥಳದಲ್ಲಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

 ಅಮ್ಮಂಗೋಡಿನ ದಿ| ಎ.ಬಿ.  ಕುಂಞಾಮು-ಬೀಫಾತಿಮ ಬಾವಿಕ್ಕೆರೆ ದಂಪತಿ ಪುತ್ರ ಎ.ಬಿ. ಇಕ್ಭಾಲ್ (44) ಸಾವನ್ನಪ್ಪಿದ ಯುವಕ. ಕಳೆದ 25 ವರ್ಷಗಳಿಂದ ಗಲ್ಫ್‌ನಲ್ಲಿ ದುಡಿಯುತ್ತಿದ್ದ ಇಕ್ಭಾಲ್ ಮೂರೂವರೆ ತಿಂಗಳ ಹಿಂದೆ ಕೆಲಸಕ್ಕೆಂದು ಬೆಹ್ರೈನ್‌ಗೆ ಹೋಗಿ ದ್ದರು. ಅಲ್ಲಿರುವ ವಾಸಸ್ಥಳದಲ್ಲಿ ನಿನ್ನೆ ಸಂಜೆ ಅವರು ಮಂಚದ ಕೆಳಗೆ ಬಿದ್ದ ಸ್ಥಿತಿಯಲ್ಲಿ  ಸ್ನೇಹಿತರು ಪತ್ತೆಹಚ್ಚಿದ್ದರು. ನಂತರ ಆಸ್ಪತ್ರೆಗೆ ಸಾಗಿಸಿದ್ದು ಅಷ್ಟರೊಳಗೆ  ಸಾವನ್ನಪ್ಪಿದರೆಂದು  ಜತೆಗಿದ್ದ ಸ್ನೇಹಿತರು ತಿಳಿಸಿದ್ದಾರೆ.

ಮೃತರು ತಾಯಿಯ ಹೊರತಾಗಿ ಪತ್ನಿ ಸುಮಯ್ಯ, ಮಕ್ಕಳಾದ ಅಹಮ್ಮದ್ ಫಾರೀಸ್, ಫರ್ಸಾನ, ರಶೀದ್, ಫಾಯೀಸ್, ಸಹೋದರ-ಸಹೋದರಿಯರಾದ ಎ.ಬಿ. ಕಲಾಂ, ಎ.ಬಿ. ರಿಯಾಸ್, ಫೌಸಿಯಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಇಕ್ಭಾಲ್‌ರ ಮೃತದೇ ಹವನ್ನು ಊರಿಗೆ ತರುವ ಅಗತ್ಯದ ಕ್ರಮ  ಆರಂಭಿಸಲಾಗಿದೆ.

RELATED NEWS

You cannot copy contents of this page