ಉದ್ಯೋಗ ಖಾತರಿ ಯೋಜನೆ ಬುಡಮೇಲುಗೊಳಿಸುವ ಕೇಂದ್ರ ಸರಕಾರದ ನೀತಿ ವಿರುದ್ಧ ಸಿಪಿಎಂ ಪ್ರತಿಭಟನೆ

ಪೈವಳಿಕೆ: ಮಹಾತ್ಮಾಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ಹೆಸರನ್ನು ಬದಲಾಯಿಸಿ ಯೋಜನೆಯನ್ನೇ ಬುಡಮೇಲುಗೊಳಿ ಸಲಿರುವ ಕೇಂದ್ರ ಸರಕಾರದ ನೀತಿಯನ್ನು ಖಂಡಿಸಿ ಸಿಪಿಎಂ ಮಂಜೇಶ್ವರ ಏರಿಯಾ ಸಮಿತಿ ನೇತೃತ್ವದಲ್ಲಿ ಹೊಸಂಗಡಿಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಬಡ ಕಾರ್ಮಿಕರಿಗೆ ವರದಾನವಾಗಿದ್ದ ಉದ್ಯೋಗ ಖಾತರಿ ಯೋಜನೆಯ ನಿಬಂಧನೆಗಳನ್ನು ಬದಲಾಯಿಸಿ ಜನರಿಗೆ ಉಪಯೋಗವಿಲ್ಲದಂತೆ ಮಾಡಲು ಕೇಂದ್ರ ಯತ್ನಿಸುತ್ತಿದೆ ಎಂದು ಸಿಪಿಎಂ ಆರೋಪಿಸಿದೆ. ಅಬ್ದುಲ್ ರಜಾಕ್ ಚಿಪ್ಪಾರ್ ಅಧ್ಯಕ್ಷತೆ ವಹಿಸಿದರು. ಮುಖಂಡರಾದ ಕೆ.ಆರ್. ಜಯಾನಂದ ಉದ್ಘಾಟಿಸಿದರು. ಚಂದ್ರ ನಾಯ್ಕ್ ಮಾಣಿಪ್ಪಾಡಿ, ವಿನಯ ಕುಮಾರ್, ಭಾರತಿ ಎಸ್, ಗೀತಾ ಸಾಮಾನಿ, ಬೇಬಿ ಶೆಟ್ಟಿ, ಲೋಕೇಶ್, ಕಮಲಾಕ್ಷ ಕೆ, ಕಮಲಾಕ್ಷ ಡಿ, ಪ್ರಶಾಂತ್ ಕನಿಲ, ಸಾದಿಕ್ ಚೆರುಗೋಳಿ, ರವೀಂದ್ರ ಶೆಟ್ಟಿ, ಅಶ್ರಫ್ ಕುಂಜತ್ತೂರು, ಹನೀಫ ಶಿರಿಯ, ಮೋಹನ ಮಾಸ್ತರ್, ಪುರುಷೋತ್ತಮ ಬಳ್ಳೂರು, ಹಾರಿಸ್ ಪೈವಳಿಕೆ ನೇತೃತ್ವ ನೀಡಿದರು.

ಪೈವಳಿಕೆ: ಲೋಕಲ್ ಸಮಿತಿಯ ನೇತೃತ್ವದಲ್ಲಿ ಪೈವಳಿಕೆ ಅಂಚೆ ಕಚೇರಿಗೆ ನಡೆದ ಮಾರ್ಚನಲ್ಲಿ ಸಿಪಿಎಂ ಪೈವಳಿಕೆ ಲೋಕಲ್ ಕಾರ್ಯದರ್ಶಿ ಚಂದ್ರ ನಾಯ್ಕ್ ಮಾನಿಪ್ಪಾಡಿ ಅಧ್ಯಕ್ಷತೆ ವಹಿಸಿದ್ದು, ಮಂಜೇಶ್ವರ ಏರಿಯಾ ಸಮಿತಿ ಸದಸ್ಯ ಅಬ್ದುಲ್ ರಜಾಕ್ ಚಿಪ್ಪಾರು ಉದ್ಘಾಟಿಸಿದರು. ಹುಸೈನ್, ಬಾಬು ವಾದ್ಯಪಡ್ಪು, ಶ್ರೀನಿವಾಸ ಭಂಡಾರಿ, ಜಯಂತಿ ಕೆ, ರೆಹಮ್ಮತ್, ಜಯಂತಿ, ಪೂರ್ಣಿಮ, ಅಬ್ದುಲ್ಲ ಕೆ, ಶಾಂಭವಿ ಬಾಯಿಕಟ್ಟೆ ನೇತೃತ್ವ ನೀಡಿದರು.

RELATED NEWS

You cannot copy contents of this page