ಕಾಸರಗೋಡು: ಮನೆಯಿಂದ 2.50 ಲಕ್ಷ ರೂ. ಮೌಲ್ಯದ ಚಿನ್ನದೊಡವೆ ಕಳವುಗೈದ ಬಗ್ಗೆ ಕಾಸರಗೋಡು ಪೊಲೀಸರಿಗೆ ದೂರು ನೀಡಲಾಗಿದೆ. ನಗರದ ನೆಲ್ಲಿಕುಂಜೆ ಬಂಗರಗುಡ್ಡೆ ನಿವಾಸಿ ಬದರ್ ಬಿಲಾಲ್ ಸಿ.ಎಂ (37) ಎಂಬವರು ಈ ಬಗ್ಗೆ ದೂರು ನೀಡಿದ್ದು, ಅದರಂತೆ ಪೊಲೀಸರು ಪ್ರಕರಣ ದಾಖಲಿಸಿ ಕೊಂಡು ತನಿಖೆ ಆರಂಭಿಸಿದ್ದಾರೆ.
ಡಿಸೆಂಬರ್ 23ರಂದು ಬಂಗರ ಗುಡ್ಡೆಯಲ್ಲಿ ತಾನು ವಾಸಿಸುತ್ತಿರುವ ಬಾಡಿಗೆ ಮನೆಯೊಳಗಿನ ಕಪಾಟಿನ ಲ್ಲಿರಿಸಿದ್ದ 2.50 ಲಕ್ಷ ರೂ. ಮೌಲ್ಯದ ಎರಡೂವರೆ ಪವನ್‌ನ ಚಿನ್ನದೊ ಡವೆಯನ್ನು ಕಳವುಗೈದಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಬದರ್ ಬಿಲಾಲ್ ತಿಳಿಸಿದ್ದಾರೆ.







