ಪೆರ್ಲ: ಬಿಜೆಪಿಯ ಧೀಮಂತ ನಾಯಕ, ಮಾಜಿ ಪ್ರಧಾನಿ ದಿ| ಅಟಲ್ ಬಿಹಾರಿ ವಾಜಪೇಯಿ ಅವರ ಸಂ ಸ್ಮರಣೆಯೊಂದಿಗೆ ತ್ರಿಸ್ತರ ಪಂಚಾಯತ್ ಚುನಾವಣೆಯಲ್ಲಿ ಎಣ್ಮಕಜೆ ಪಂ.ನ 9ನೇ ವಾರ್ಡ್ ವಾಣಿನಗರದಿಂದ ವಿಜೇತರಾದ ನಳಿನಾಕ್ಷಿ ರವೀಶ್ ಹಾಗೂ ಪಕ್ಷದ ಅಭ್ಯರ್ಥಿಗಳ ಗೆಲುವಿ ಗಾಗಿ ದುಡಿದ ಕಾರ್ಯಕರ್ತರಿಗೆ ಬಿಜೆಪಿ ವಾಣಿನಗರ ವಾರ್ಡ್ ಸಮಿತಿ ವತಿಯಿಂದ ಅಭಿನಂದನಾ ಸಭೆ ಹಿರಿಯ ಕಾರ್ಯಕರ್ತ ಜಗದೀಶ್ ಕುತ್ತಾಜೆ ಅವರ ನಿವಾಸದಲ್ಲಿ ಜರುಗಿತು.
ವಾಣಿನಗರ ವಾರ್ಡ್ ಸಮಿತಿ ಅಧ್ಯಕ್ಷ ಮಹೇಶ್ ಕುಂಡಾಪು ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೋಟ್ಯಾಡಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಬಿಜೆಪಿ ಜಿಲ್ಲಾ ಸಮಿತಿ ಉಪಾಧ್ಯಕ್ಷ ಮಣಿಕಂಠ ರೈ, ಮಂಡಲ ಪ್ರಧಾನ ಕಾರ್ಯದರ್ಶಿ ಕೆ. ಪಿ ಅನಿಲ್ ಕುಮಾರ್, ಪಂ. ಸಮಿತಿ ಅಧ್ಯಕ್ಷ ರಮಾನಂದ ಎಡಮಲೆ, ಪ್ರಧಾನ ಕಾರ್ಯದರ್ಶಿ ರಾಧಾಕೃಷ್ಣ ಭಟ್ ಪತ್ತಡ್ಕ, ಎಣ್ಮಕಜೆ ಪಂಚಾಯತ್ ಮಾಜಿ ಅಧ್ಯಕ್ಷ ಗಣಪತಿ ಭಟ್ ಪತ್ತಡ್ಕ, ಮಂ ಜೇಶ್ವರ ಬ್ಲಾಕ್ ಪಂ.ಗೆ ಆಯ್ಕೆಯಾದ ವಿದ್ಯಾ ಕುಮಾರಿ, ನೂತನ ಪಂಚಾ ಯತ್ ಸದಸ್ಯರಾದ ಸದಾನಂದ, ವಿಜಯ ಕೆ.ಸಿ, ಪುಷ್ಪಾವತಿ ರೈ ಕಾಟುಕುಕ್ಕೆ, ಕೃಷ್ಣಪ್ಪ ಬಜಕೂಡ್ಲು, ಜಗದೀಶ್ ಕುಲಾಲ್ ನಲ್ಕ ಉಪಸ್ಥಿತರಿದ್ದರು. ಪುನೀತ್ ಕುತ್ತಾಜೆ ಸ್ವಾಗತಿಸಿ, ಶಶಿಕಲಾ ಇಳಂತೋಡಿ ವಂದಿಸಿದರು. ಸುರೇಶ್ ವಾಣಿನಗರ ನಿರೂಪಿಸಿದರು.







