ಕಾರು ಢಿಕ್ಕಿ ಹೊಡೆದು ಇಬ್ಬರು ವಿದ್ಯಾರ್ಥಿಗಳಿಗೆ ಗಂಭೀರ ಗಾಯ: ಚಾಲಕನ ವಿರುದ್ಧ ಕೇಸು

ಮುಳ್ಳೇರಿಯ:   ಕಾರು ಢಿಕ್ಕಿ ಹೊಡೆದು ಇಬ್ಬರು ವಿದ್ಯಾರ್ಥಿಗಳು ಗಂಭೀರ ಗಾಯಗೊಂಡ ಘಟನೆಗೆ ಸಂಬಂಧಿಸಿ ಕಾರು ಚಾಲಕನ ವಿರುದ್ಧ ಆದೂರು ಪೊಲೀಸರು ಕೇಸು ದಾಖಲಿಸಿಕೊಂ ಡಿದ್ದಾರೆ. ನಿರ್ಲಕ್ಷ್ಯ ಹಾಗೂ ಅಜಾಗ್ರತೆಯಿಂದ ಅಪರಿಮಿತ ವೇಗದಲ್ಲಿ, ಮನುಷ್ಯ ಜೀವಕ್ಕೆ  ಅಪಾಯ ಉಂಟಾಗುವ  ರೀತಿಯಲ್ಲಿ ಕಾರು ಚಲಾಯಿಸಿರು ವುದಾಗಿ ಪ್ರಕರಣ ದಾಖಲಿಸಲಾಗಿದೆ.  ಕಳೆದ ಮಂಗಳವಾರ ಸಂಜೆ 4 ಗಂಟೆ ವೇಳೆ ಅಪಘಾತ ಸಂಭವಿಸಿದೆ. ಮುಳ್ಳೇರಿಯ ವಿವೇಕಾನಂದನಗರದ ಶ್ರೀಯಾನ್ (5), ದೀಕ್ಷಾ (17) ಎಂಬಿವರು ಗಾಯಗೊಂಡಿದ್ದು, ಇವರನ್ನು ಆಸ್ಪತ್ರೆಯಲ್ಲಿ ದಾಖಲಿಸ ಲಾಗಿದೆ. ದೀಕ್ಷಾ ಮುಳ್ಳೇರಿಯ ಸರಕಾರಿ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆಯ ಪ್ಲಸ್‌ಟು ವಿದ್ಯಾರ್ಥಿನಿಯಾಗಿದ್ದಾಳೆ. ಈಕೆ   ಗಜಾನನ ಪ್ರೀ ಪ್ರೈಮರಿ ಶಾಲೆ  ವಿದ್ಯಾರ್ಥಿಯಾದ      ಶ್ರೀಯಾನ್ ನೊಂದಿಗೆ   ಮನೆಗೆ ಹೋಗುತ್ತಿದ್ದ ವೇಳೆ ಅವರಿಗೆ  ಗಜಾನನ ಶಾಲೆ ಸಮೀಪದ ರಸ್ತೆಯಲ್ಲಿ ಕಾರು ಢಿಕ್ಕಿ ಹೊಡೆದಿದೆ.

You cannot copy contents of this page