ಉಪ್ಪಳ: ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯ ಕುಬಣೂರು ಸುವರ್ಣಗಿರಿ ಹೊಳೆಯಲ್ಲಿ ವ್ಯಾಪಕ ತ್ಯಾಜ್ಯವನ್ನು ಎಸೆದು ಪರಿಸರ ದುರ್ವಾಸನೆಯಿಂದ ಸಮಸ್ಯೆ ಉಂಟಾಗುತ್ತಿರುವುದಾಗಿ ದೂರಲಾಗಿದೆ. ಗೋಣಿ ಚೀಲ, ಪ್ಲಾಸ್ಟಿಕ್ ಚೀಲದಲ್ಲಿ ಆಹಾರ ತ್ಯಾಜ್ಯ ಸಹಿತ ವಿವಿಧ ತ್ಯಾಜ್ಯಗಳನ್ನು ತಂದು ಉಪೇಕ್ಷಿಸಲಾಗುತ್ತಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ. ಇದರಿಂದ ನೀರು ಮಲಿನಗೊಳ್ಳುತ್ತಿದೆ. ಶಾಂತಿಗುರಿಯಿAದ ಕುಬಣೂರು ವಿದ್ಯಾನಗರಕ್ಕೆ ಸಾಗುವ ಸೇತುವೆ ಇದಾಗಿದ್ದು, ಹೊಳೆ ಪರಿಸರದಲ್ಲಿ ದೇವಸ್ಥಾನ, ಮಸೀದಿ ಸಹಿತ ಹಲವಾರು ಮನೆಗಳು ಹಾಗೂ ನೂರಾರು ಮಂದಿ ಈ ರಸ್ತೆ ಮೂಲಕ ಸಂಚರಿಸÀÄತ್ತಿದ್ದಾರೆ. ರಾತ್ರಿ ಹೊತ್ತಲ್ಲಿ ತ್ಯಾಜ್ಯಗಳನ್ನು ವಾಹನದ ಮೂಲಕ ತಲುಪಿ ಹೊಳೆಗೆ ಸುರಿಯಲಾಗುತ್ತಿದೆ. ನೀರಿನಲ್ಲಿ ತ್ಯಾಜ್ಯ ಹರಿದು ಹೋಗದೆ ಅಲ್ಲಲ್ಲಿ ಕಟ್ಟಿ ನಿಂತು ದುರ್ವಾಸನೆಗೆ ಕಾರಣವಾಗಿದೆ. ಹಲವು ವರ್ಷಗಳ ಹಿಂದೆ ಇದೇ ಹೊಳೆಯಲ್ಲಿ ಭಾರೀ ಪ್ರಮಾಣದಲ್ಲಿ ಪ್ಲಾಸ್ಟಿಕ್ ಗೋಣಿ ಚೀಲದಲ್ಲಿ ತುಂಬಿಸಿದ ಸಮಾರಂಭಗಳ ವಿವಿಧ ತ್ಯಾಜ್ಯಗಳ ರಾಶಿ ಪತ್ತೆಯಾಗಿದ್ದು, ಇದು ಸ್ಥಳೀಯರಲ್ಲಿ ತೀವ್ರ ಪ್ರತಿಭಟನೆಗೆ ಕಾರಣವಾಗಿತ್ತು. ಸಂಬAಧಪಟ್ಟ ಅಧಿಕಾರಿಗಳು ಈ ಪರಿಸರದಲ್ಲಿ ಸಿಸಿ ಕ್ಯಾಮರವನ್ನು ಅಳವಡಿಸಿ ಹೊಳೆಗೆ ತ್ಯಾಜ್ಯ ಎಸೆಯುವವರ ವಿರುದ್ದ ಕ್ರಮಕ್ಕೆ ಮುಂದಾಗಬೇಕೆAದು ಸ್ಥಳೀಯರು ಒತ್ತಾಯಿಸಿದ್ದಾರೆ.







