ಹೊಸದುರ್ಗ: ಚಿತ್ತಾರಿಕಲ್ ಕುನ್ನುಂಗೈಯಲ್ಲಿ ಕೆಎಸ್‌ಆರ್‌ಟಿಸಿ ಬಸ್ ಹಾಗೂ ಬೈಕ್ ಮಧ್ಯೆ ಉಂಟಾದ ಅಪಘಾತದಲ್ಲಿ ಯುವಕ ಮೃತಪಟ್ಟಿದ್ದಾರೆ. ಕಾಞಂಗಾಡ್ ಚೆರುವತ್ತೂರು- ಚೀಮೇನಿ ರೂಟ್ ನಲ್ಲಿ ಸಾಗುವ ಖಾಸಗಿ ಬಸ್‌ನ ಚಾಲಕನಾಗಿರುವ ಕುನ್ನುಂಗೈ ಮುಳ್ಳಿಕ್ಕಾಡ್ ನಿವಾಸಿ ಪ್ರವೀಣ್ (28) ಮೃತಪಟ್ಟ ಯುವಕ. ನಿನ್ನೆ ಸಂಜೆ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಗಂಭೀರ ಗಾಯಗೊಂಡ ಕೂಡಲೇ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ.







