ಕುಟುಂಬ ಮಸೀದಿಗೆ ತೆರಳಿದ್ದ ಸಮಯದಲ್ಲಿ ಮನೆಯಿಂದ ಚಿನ್ನ, ಬೆಳ್ಳಿ ಕಳವು

ಕಾಸರಗೋಡು: ಕುಟುಂಬ ಮಸೀದಿಗೆ ತೆರಳಿದ್ದ ಸಮಯದಲ್ಲಿ ಮನೆಯಿಂದ ಚಿನ್ನ- ಬೆಳ್ಳಿ ಆಭರಣಗಳು ಹಾಗೂ ದಾಖಲೆಗಳನ್ನು ಕಳವುಗೈಯ್ಯಲಾಗಿದೆ ಎಂದು ದೂರಲಾಗಿದೆ. ಕಾಞಂಗಾಡ್, ಪಡನ್ನಕ್ಕಾಡ್ ಕುರುಂದೂರುನ ಪಿ.ಕೆ. ಜೋಜಿಯವರ ಮನೆಯಿಂದ ಕಳವು ನಡೆಸಲಾಗಿದೆ.

ಬುಧವಾರ ರಾತ್ರಿ 12 ಗಂಟೆ ಹಾಗೂ ಗುರುವಾರ ಮುಂಜಾನೆ 2.30ರ ಮಧ್ಯೆ ಕಳವು ನಡೆದಿದೆ. ಮನೆಯ ಮುಂಭಾಗದ ಬಾಗಿಲನ್ನು ಮುರಿದು ಒಳನುಗ್ಗಿ ಕಳ್ಳರು ಕಪಾಟಿನಲ್ಲಿರಿಸಿದ್ದ ೨ ಪವನ್ ಚಿನ್ನಾಭರಣ ಹಾಗೂ ಬೆಳ್ಳಿಯ ಸೊಂಟಪಟ್ಟಿ ಇತರ ದಾಖಲೆಗಳನ್ನು ಕಳವುಗೈದಿರುವುದಾಗಿ ಹೊಸದುರ್ಗ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಎಸ್‌ಐ ಸಿ.ಪಿ. ಜಿಜೇಶ್‌ರ ನೇತೃತ್ವದಲ್ಲಿ ತನಿಖೆ ನಡೆಸಲಾಗುತ್ತಿದೆ.

RELATED NEWS

You cannot copy contents of this page