ಕಾಸರಗೋಡು: ಆಲಂಪಾಡಿ ಮಿಹ್ರಾಜ್ ಹೌಸ್ನ ಪಿ.ಎಂ. ಖಮರುದ್ದೀನ್ ಎಂಬವರನ್ನು ಬೆದರಿಸಿ 1,01,000 ರೂ. ಎಗರಿಸಿದ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಆರೋಪಿಗಳನ್ನು ಕಾಸರಗೋಡು ಪೊಲೀಸರು ಬಂಧಿಸಿದ್ದಾರೆ.
ಉಳಿಯತ್ತಡ್ಕ ನೇಶನಲ್ ನಗರದ ಸುಲೈಮಾನ್ ಆದಿಲ್ (18), ಮಂಜತ್ತಡ್ಕದ ಅಹಮ್ಮದ್ ಕಬೀರ್ (26), ಉಳಿಯತ್ತಡ್ಕದ ರೈಯೀಸ್ ಅಹಮ್ಮದ್ (19) ಮತ್ತು ಪಳ್ಳಂ ನಿವಾಸಿಯಾಗಿರುವ 17ರ ಅಪ್ರಾಪ್ತ ಬಾಲಕ ಎಂಬಿವರು ಬಂಧಿತ ಆರೋಪಿಗಳಾಗಿದ್ದಾರೆ.
ಈ ತಿಂಗಳ 24ರಂದು ರಾತ್ರಿ 9.30ಕ್ಕೆ ನಗರದ ನೆಲ್ಲಿಕುಂಜೆಯಲ್ಲಿ ದೂರುಗಾರ ಖಮರುದ್ದೀನ್ರನ್ನು ತಡೆದು ನಿಲ್ಲಿಸಿ ಬೆದರಿಕೆಯೊಡ್ಡಿ ಅವರ ಪರ್ಸ್ನ್ನು ಬಲವಂತವಾಗಿ ತೆಗೆದು ಅದರಲ್ಲಿದ್ದ 2೦೦೦ ರೂ. ನಗದು ಮತ್ತು ಎಟಿಎಂ ಕಾರ್ಡ್ ತೆಗೆದು ಅದರ ಪಿನ್ಕೋಡ್ ನಂಬ್ರ ಪಡೆದು ಎಟಿಎಂನಿಂದ 99,೦೦೦ ರೂ. ಹಿಂಪಡೆದ ದೂರಿನಂತೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು. ಅದಕ್ಕೆ ಸಂಬಂಧಿಸಿ ಪೊಲೀಸರು ಈ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ನಂತರ ನ್ಯಾಯಾಲಯದ ನಿರ್ದೇಶ ಪ್ರಕಾರ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ.







