ಕಾಞಂಗಾಡ್ ಜಿಲ್ಲಾ ಜೈಲಿನಿಂದ ಪರಾರಿಯಾಗಲೆತ್ನ : ಬದಿಯಡ್ಕದ ಕಳವು ಪ್ರಕರಣದ ಆರೋಪಿ ಕೈಯಾರೆ ಸೆರೆ

ಕಾಸರಗೋಡು: ಕಾಞಂ ಗಾಡ್ ಜಿಲ್ಲಾ ಜೈಲಿನಲ್ಲಿದ್ದ  ರಿಮಾಂಡ್ ಆರೋಪಿಯೋರ್ವ ಜೈಲಿನಿಂದ ಪರಾರಿಯಾಗಲು ಯತ್ನಿಸಿದ್ದಾನೆ.  ಬದಿಯಡ್ಕ ಪೊಲೀಸರು ದಾಖಲಿಸಿಕೊಂಡ ಕಳವು ಪ್ರಕರಣದ ಆರೋಪಿ ಯಾದ ನೆಲ್ಲಿಕಟ್ಟೆ ಆಮೂಸ್ ನಗರದ ಕ್ವಾರ್ಟರ್ಸ್‌ವೊಂದರಲ್ಲಿ ವಾಸಿಸುವ ಟಿ.ಎಂ. ಅಬ್ದುಲ್ ಸುಹೈಲ್ ಎಂಬಾತ ಜೈಲಿನಿಂದ ಪರಾರಿಯಾಗಲು ಯತ್ನಿಸಿರುವುದಾಗಿ ದೂರಲಾಗಿದೆ.

ಜೈಲು ಸುಪರಿನ್‌ಟೆಂಡೆಂಟ್   ಎನ್. ಗಿರೀಶ್ ಕುಮಾರ್‌ರ ದೂರಿ ನಂತೆ  ರಿಮಾಂಡ್ ಆರೋಪಿ ಸುಹೈಲ್ ವಿರುದ್ಧ ಹೊಸದುರ್ಗ ಪೊಲೀಸರು ಕೇಸು ದಾಖಲಿಸಿಕೊಂ ಡಿದ್ದಾರೆ.  ಬೆಳಿಗ್ಗಿನ ವೇಳೆ ಸೆಲ್‌ನಿಂದ ಹೊರಗಿಳಿದ ಆರೋಪಿ  ಮರಳಿ ಜೈಲಿಗೆ ಪ್ರವೇಶಿಸುತ್ತಿದ್ದಂತೆ ಅಡುಗೆ ಕೋಣೆಯ ಮೇಲ್ಭಾಗಕ್ಕೆ ಹತ್ತಿ ಪರಾರಿಯಾಗಲು ಯತ್ನಿಸಿರುವು ದಾಗಿ ಜೈಲು ಸುಪರಿನ್‌ಟೆಂಡೆಂಟ್ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಕ್ವಾರ್ಟರ್ಸ್‌ವೊಂದರಿಂದ ೧೦ ಸಾವಿರ ರೂಪಾಯಿ ಕಳವುಗೈದ ಸಂಬಂಧ  ಬದಿಯಡ್ಕ  ಪೊಲೀಸರು ದಾಖಲಿಸಿಕೊಂಡ ಪ್ರಕರಣದಲ್ಲಿ  ಸೆರೆಗೀಡಾದ ಸುಹೈಲ್ ೨೦೨೫ ಜುಲೈ ೩೧ರಿಂದ ರಿಮಾಂಡ್ ಆರೋಪಿ ಯಾಗಿ ಜಿಲ್ಲಾ ಜೈಲಿನಲ್ಲಿದ್ದಾನೆ. 

You cannot copy contents of this page