ಜಿಲ್ಲಾ ನ್ಯಾಯಾಲಯ ಸಮುಚ್ಛಯದಲ್ಲಿ ಹುಸಿ ಬಾಂಬ್ ಬೆದರಿಕೆ ಪ್ರಕರಣ: ದಾಖಲಿಸಿ ತನಿಖೆ ಆರಂಭಿಸಿದ ಸೈಬರ್ ಪೊಲೀಸರು

ಕಾಸರಗೋಡು: ವಿದ್ಯಾನಗರದಲ್ಲಿ ರುವ ಜಿಲ್ಲಾ ನ್ಯಾಯಾಲಯ ಸಮುಚ್ಛಯದಲ್ಲಿ ನಿನ್ನೆ ಉಂಟಾದ ಹುಸಿ ಬಾಂಬ್ ಬೆದರಿಕೆ ಬಗ್ಗೆ ಕಾಸರಗೋಡು ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಜಿಲ್ಲಾ ನ್ಯಾಯಾಲಯದ ಶಿರಸ್ತೇದಾರ್ ಅನೀಶ್ ಜೋನ್ ನೀಡಿದ ದೂರಿನಂತೆ ಈ ಪ್ರಕರಣ ದಾಖಲಿಸಲಾಗಿದೆ. ನ್ಯಾಯಾಲಯದ ಸಿಬ್ಬಂದಿಗಳು ಮತ್ತು ಸಾರ್ವಜನಿಕರಲ್ಲಿ ಭೀತಿ ಸೃಷ್ಟಿಸಲೆತ್ನಿಸುವ ಮೂಲಕ ಭದ್ರತೆಗೆ ಧಕ್ಕೆ ತರುವ ರೀತಿಯಲ್ಲಿ ವರ್ತಿಸಿದ ಆರೋಪದಂತೆ ಈ ಪ್ರಕರಣ ದಾಖಲಿಸಲಾಗಿದೆ.

ತಮಿಳು ಲಿಬರೇಶನ್ ಆರ್ಗನೈಸೇಶನ್ (ಟಿಎಲ್‌ಒ) ಎಂಬ ಹೆಸರಲ್ಲಿ ನಿನ್ನೆ ಮುಂಜಾನೆ 3.30ರ ವೇಳೆಗೆ ಜಿಲ್ಲಾ ನ್ಯಾಯಾಲಯಕ್ಕೆ ಈ ಹುಸಿ ಬಾಂಬ್ ಸಂದೇಶ ಲಭಿಸಿತ್ತು.  ನ್ಯಾಯಾಲಯದ ಶಿರಸ್ತೇದಾರ್ ಬೆಳಿಗ್ಗೆ 10 ಗಂಟೆ ಬಳಿಕ ಇಮೈಲ್ ಪರಿಶೀಲಿ ಸಿದಾಗ ಅದರಲ್ಲಿ ಮಲೆಯಾಳಂನಲ್ಲಿ ಬರೆದ ಬಾಂಬ್ ಬೆದರಿಕೆ ಸಂದೇಶ ಅವರ ಗಮನಕ್ಕೆ ಬಂದಿದೆ. ತಕ್ಷಣ ಅವರು ಪೊಲೀಸರಿಗೆ ಮಾಹಿತಿ ನೀಡಿದರು.  ಕೂಡಲೇ ಬಾಂಬ್ ಸ್ಕ್ವಾಡ್ ಮತ್ತು ಶ್ವಾನದಳ ನ್ಯಾಯಾಲಯ ಸಮುಚ್ಛಯಕ್ಕೆ ಧಾವಿಸಿ ಸಿಬ್ಬಂದಿಗಳು ಹಾಗೂ ಜನರನ್ನು ಸಮುಚ್ಛಯದಿಂದ ಪೂರ್ಣವಾಗಿ ತೆರವುಗೊಳಿಸಿ ವ್ಯಾಪಕಶೋಧ ನಡೆಸಿದರೂ ಅಲ್ಲಿ ಏನೂ ಪತ್ತೆಯಾಗಲಿಲ್ಲ. ಬಾಂಬ್ ಇಲ್ಲವೆಂದು ಖಾತರಿಪಡಿಸಿದ ಬಳಿಕವಷ್ಟೇ ೧೧.೪೫ರ ವೇಳೆಗೆ ನ್ಯಾಯಾಲಯದ ಸಿಬ್ಬಂದಿಗಳು ಹಾಗೂ ಇತರರ ದೇಹ ತಪಾಸಣೆಗೊಳಿ ಸಿದ ಬಳಿಕ ಅವರನ್ನು  ನ್ಯಾಯಾಲಯ ಸಮುಚ್ಛದೊಳಗೆ ಪ್ರವೇಶಿಸಬಿಡ ಲಾಯಿತು. ೩ಆರ್‌ಡಿಎಕ್ಸ್‌ಐಇಡಿ ಬಾಂಬ್‌ಗಳನ್ನು ನ್ಯಾಯಾಲಯ ಸಮುಚ್ಛಯದಲ್ಲಿರಿಸಲಾಗಿದೆ. ಆರ್‌ಡಿಎಕ್ಸ್ ಧರಿಸಿದ ಇಬ್ಬರು ವ್ಯಕ್ತಿಗಳು ನ್ಯಾಯಾಲಯಕ್ಕೆ ತಲುಪುವರು. ಮಧ್ಯಾಹ್ನ 1ರಿಂದ 2 ಗಂಟೆಯೊಳಗೆ ಬಾಂಬ್ ಸ್ಫೋಟಿಸಲಾಗುವುದೆಂದು ಇಮೈಲ್ ಸಂದೇಶದಲ್ಲಿ ತಿಳಿಸಲಾಗಿದೆ. ತಮಿಳುನಾಡು ಪೊಲೀಸರು ಮತ್ತು ಕೆಲವು ರಾಜಕೀಯ ಸಂಘಟನೆಗಳನ್ನು ಗುರಿಯಾ ಗಿಸುವ ಸಂದೇಶವೂ ಇಮೈಲ್‌ನಲ್ಲಿ ಒಳಗೊಂ ಡಿತ್ತು. ಸೈಬರ್ ಪೊಲೀಸರು ಆ ಬಗ್ಗೆ ಸಮಗ್ರ ತನಿಖೆ ಆರಂಭಿಸಿದ್ದಾರೆ.  ಈ ಸಂದೇಶ ಕಳುಹಿಸಿದವರ ಪತ್ತೆಗಾಗಿ ತೀವ್ರ ಯತ್ನ ನಡೆಸಲಾಗುವುದೆಂದು ಉನ್ನತ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

RELATED NEWS

You cannot copy contents of this page