ಕಾಸರಗೋಡು: ದೇಶದ ಉದ್ದಗಲ ಸಂಚರಿಸಿದಾಗ ಪ್ರತಿಯೊಂದೆಡೆಯೂ ವೈವಿಧ್ಯಮಯ ಭಾಷೆ, ಸಂಸ್ಕೃತಿ, ಜನಜೀವನ ಗಮನ ಸೆಳೆಯುತ್ತದೆ. ಇಂತಹ ವಿವಿಧತೆಯ ಮಧ್ಯೆ ಒಂದನ್ನೊAದು ಕೂಡಿ ಕಲೆತಾಗ ಉತ್ತಮ ಸಮಾಜ ರೂಪುಗೊಳ್ಳುತ್ತದೆ ಎಂದು ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನ ಮರದ ಅಭಿಪ್ರಾಯ ವ್ಯಕ್ತಪಡಿಸಿದರು.
ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ನಾಟ್ಯರತ್ನಂ ಕಣ್ಣನ್ ಪಾಟಾಳಿ ಸ್ಮಾರಕ ಕಥಕ್ಕಳಿ ಟ್ರಸ್ಟ್ ಅರವತ್ತ್ ಬೇಕಲ, ಕರ್ನಾಟಕ ಜಾನಪದ ಪರಿಷತ್ತು ಬೆಂಗಳೂರು, ಕೇರಳ ಗಡಿನಾಡ ಘಟಕ ಕಾಸರಗೋಡು ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಂಯುಕ್ತ ಆಶ್ರಯದಲ್ಲಿ ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಕಾಸರಗೋಡು ಮತ್ತು ಕರ್ನಾಟಕ ಜಾನಪದ ಪರಿಷತ್ತು ಯುಎಇ ಮತ್ತು ಒಮಾನ್ ಘಟಕದ ಸಹಕಾರದಲ್ಲಿ ಬೇಕಲ ಅರವತ್ತ್ ಆಂಫಿಥಿಯೇಟರ್ಸ್ನಲ್ಲಿ ಆಯೋಜಿಸಲಾಗಿದ್ದ ‘ಸಮನ್ವಯ’ ಗಡಿನಾಡ ಜಾನಪದ ಉತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗಡಿನಾಡು ಕಾಸರಗೋಡಿನ ಕನ್ನಡಿ ಗರು ವ್ಯಾವಹಾರಿಕವಾಗಿ ಕೇರಳದಲ್ಲಿದ್ದರೂ, ಮಾನಸಿಕವಾಗಿ ಕನ್ನಡದೊಂದಿಗೆ ಹಾಸುಹೊಕ್ಕಾಗಿದ್ದಾರೆ. ಇಲ್ಲಿಯ ಕನ್ನಡಿ ಗರು ಮಲೆಯಾಳವನ್ನು ಒಪ್ಪಿ ಭಾವನೆಗೆ ಧಕ್ಕೆಯಾಗದಂತೆ ನಡೆಯುತ್ತಿದ್ದಾರೆ. ಮಲೆ ಯಾಳಿಗರೂ ಆ ಭಾವನೆಯನ್ನು ಅರ್ಥೈಸಿ ಬೆಂಬಲವಾಗಿ ಸಮನ್ವಯತೆಯಿಂದ ಬಾಳ ನ್ನು ಕಲ್ಪಿಸಲು ಮರೆಯ ಬಾರದು ಎಂದ ವರು ಸೂಚಿಸಿ ದರು. ಶಾಸಕ ಸಿ.ಎಚ್. ಕುಂಞAಬು ಉದ್ಘಾಟಿಸಿ ಮಾತನಾಡಿ, ಕೇರಳ ಸರ್ಕಾರ ಭಾಷಾ ಅಲ್ಪಸಂಖ್ಯಾತ ಕನ್ನಡಿಗರನ್ನು ಅವಗಣಿಸುವುದಿಲ್ಲ ಎಂದು ತಿಳಿಸಿದರು. ಕನ್ನಡದ ಜೊತೆಗೆ ಇಲ್ಲಿಯ ತುಳು ಸಹಿತ ಇತರ ಭಾಷೆಗಳೆಲ್ಲವನ್ನೂ ಸೇರಿಸಿ ಸಾಂಸ್ಕೃತಿಕ ಉತ್ಸವವೊಂದು ಮುಂದಿನ ದಿನಗಳಲ್ಲಿ ಮೂಡಿಬರಲಿ ಎಂದು ಹಾರೈಸಿದರು.
ಕರ್ನಾಟಕ ಜಾನಪದ ಪರಿಷತ್ತು, ಬೆಂಗಳೂರು ಅಧ್ಯಕ್ಷ ಪ್ರೊ.ಹಿ.ಚಿ. ಬೋರಲಿಂಗಯ್ಯ, ಗ.ಸಾ.ಸಾ.ಅ.ಪ್ರಾ. ಕಾಸರಗೋಡು ಅಧ್ಯಕ್ಷ ಎಸ್.ಪ್ರದೀಪ್ ಕುಮಾರ್ ಕಲ್ಕೂರ, ಕರ್ನಾಟಕ ಕನಿಷ್ಠ ವೇತನ ಆಯೋಗದ ಅಧ್ಯಕ್ಷ ಟಿ.ಎಂ.ಶಹೀದ್, ಕೆ.ಆರ್.ಎಸ್.ಎಂ.ಕೇರಳ ಅಧ್ಯಕ್ಷ ರಾಘವ ಚೇರಾಲ್, ಕ.ಜಾ.ಪ ಕೇರಳ ಘಟಕ ಅಧ್ಯಕ್ಷ ಡಾ.ಮಲ್ಲಿಕಾರ್ಜುನ ಎಸ್. ನಾಸಿ, ಮಂಗಳೂರು ಅಧ್ಯಕ್ಷ ಪ್ರವೀಣ್ ಕುಮಾರ್ ಕೊಡಿಯಾಲ್ ಬೈಲ್, ಯುಎಇ ಘಟಕದ ಅಧ್ಯಕ್ಷ ಸದನ್‌ದಾಸ್ ಶಿರೂರು, ಒಮಾನ್ ಘಟಕದ ಅಧ್ಯಕ್ಷ ಶಿವಾನಂದ ಕೋಟ್ಯಾನ್ ಕಟಪಾಡಿ ಶುಭಹಾರೈಸಿದರು. ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಎ.ಆರ್.ಸುಬ್ಬಯ್ಯಕಟ್ಟೆ, ಅಖಿಲೇಶ್ ನಗುಮುಗಂ ಉಪಸ್ಥಿತರಿದ್ದರು.
ಈ ಸಂದರ್ಭ ಶಿವಾನಂದ ಕೋಟ್ಯಾನ್ ಕಟಪಾಡಿ ಅವರ ‘ನಂಟು’ ಕನ್ನಡ ಕೃತಿ, ಮಲೆಯಾಳ ಕೃತಿ, ಡಾ.ಜಯರಾಜನ್ ಕಾನಾಡ್ ಅವರು ಬರೆದ ‘ಬರವುದ ಸಾದಿ’, ಮುನೀರ ಎ. ಬರೆದ ‘ಹೃದಯ ರಾಗ’ ಕವನ ಸಂಕಲನ ಬಿಡುಗಡೆ ನಡೆಯಿತು. ಮುದಿಯಕ್ಕಲ್‌ನಿಂದ ಟ್ರಸ್ಟ್ ಕಚೇರಿವರೆಗೆ ಸಾಂಸ್ಕೃತಿಕ ಮೆರವಣಿಗೆ ನಡೆಯಿತು. ಎನ್.ಕೆ.ಪಿ.ಎಸ್.ಕೆ.ಟ್ರಸ್ಟ್ ಅಧ್ಯಕ್ಷ ಪ್ರೊ.ಎ.ಎಂ.ಶ್ರೀಧರನ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಸ್ವಾಗತ ಸಮಿತಿ ಅಧ್ಯಕ್ಷ ಪಿ.ಭಾಸ್ಕರನ್ ವಂದಿಸಿದರು. ರವಿ ನಾಯ್ಕಾಪು ನಿರೂಪಿಸಿದರು.
ಕಥಕಳಿ-ಯಕ್ಷಗಾನ ಪ್ರದರ್ಶನದಲ್ಲಿ ಕೋಟಕಲ್ ಉಣ್ಣಿಕೃಷ್ಣನ್(ಕಥಕಳಿ) ಮತ್ತು ಜಯರಾಮ ಪಟಾಳಿ ಪಡುಮಲೆ(ಯಕ್ಷಗಾನ) ಪ್ರಸ್ತುತಪಡಿಸಿದರು. ಪೂರಕ್ಕಳಿ, ಕೋಲ್ಕಳಿ, ವೀರಗಾಸೆ, ನಾಸಿಕ್ ಡೋಳು, ಜಾನಪದ ನೃತ್ಯ, ಸಮೂಹ ನೃತ್ಯ, ಇತರ ಸಾಂಪ್ರದಾಯಿಕ ಮತ್ತು ಜಾನಪದ ಕಲಾ ಪ್ರಕಾರಗಳು, ಕೈಕೊಟ್ಟಿಕಳಿ, ದಫ್ ಮುಟ್ಟ್, ಮಂಗಳAಕಳಿ ಅಲಾಮಿಕಳಿ, ಇರುಳನೃತ್ಯಂ, ಯಕ್ಷಗಾನ, ಕಥಕ್ಕಳಿ, ಪೂಜಾಕುಣಿತ, ಗಧಾಯುದ್ಧ ಯಕ್ಷಗಾನ, ‘ಲವಣಾಸುರವಧಮ್’ ಕಥಕ್ಕಳಿ ಪ್ರದರ್ಶನ ನಡೆಯಿತು.
ಬೋರ್ಗ್ ರೋಲ್ಸ್ ವಾರ್ನರ್ ಸಂಸ್ಥಾಪಕ ನಜೀರ್ ವೆಲಿಯಿಲ್ ಮತ್ತು ಕಲಾಪೋಷಕ ಡಾ.ಮಣಿಕಂಠನ್ ಮೇಲೋತ್ ಅವರಿಗೆ ಭಾವ ಭಾರತಿ ಪುರಸ್ಕಾರ, ಕಥಕ್ಕಳಿ ಕಲಾವಿದ ಕೋಟಕ್ಕಲ್ ದೇವದಾಸನ್‌ರಿಗೆ ನಾಟ್ಯಾಚಾರ್ಯ ಪುರಸ್ಕಾರ, ಡಾ.ವಾದ್ಯಪ್ರವೀಣ್ ಚೆರುತಾಯಂ ಕುಞರಾಮನ್ ಮಾರಾರ್‌ರಿಗೆ ಪ್ರತಿಭಾ ಪುರಸ್ಕಾರ(ಚೆಂಡೆ), ಕೋಟಕ್ಕಲ್ ರಮೇಶನ್ ಮಾರಾರ್‌ಗೆ ಪ್ರತಿಭಾ ಪುರಸ್ಕಾರ (ಮದ್ದಳೆ), ಕೋಡೋತ್ ತರವಾಡಿಗೆ ದೇಸೀ ಪುರಸ್ಕಾರ, ಕಲಾಪೋಷಕ ಪ್ರಕಾಶ್ ಕುಂಪಲರಿಗೆ ಸಮಾಜರತ್ನ ಪ್ರಶಸ್ತಿ, ಜಾನಪದ ಕಲಾಪೋಷಕ ಜೋಸೆಫ್ ಮಥಾಯಸ್ ದುಬೈ ಮತ್ತು ಅಂಕಣಕಾರ, ಜಾನಪದ ಕಲಾ ಪೋಷಕರು ಎಸ್.ಜಗದೀಶ್ಚಂದ್ರ ಅಂಚನ್ ಸೂಟರ್‌ಪೇಟೆ ಅವರಿಗೆ ಜಾನಪದ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.







