ಕಾಸರಗೋಡು: ಕಾಞಂಗಾಡ್ ಕುಶಾಲನಗರದಲ್ಲಿ ಬಸ್ ವೈಟಿಂಗ್ ಶೆಡ್ಗೆ ಕಿಚ್ಚಿರಿಸಿ ಗಲಭೆಗೆ ಯತ್ನಿಸಲಾಯಿತೆಂಬ ಆರೋಪದಂತೆ ಹೊಸದುರ್ಗ ಪೊಲೀಸರು ಎರಡು ಕೇಸುಗಳನ್ನು ದಾಖಲಿಸಿಕೊಂಡಿದ್ದಾರೆ. ಸಿಪಿಎಂ ವಾರ್ಡ್ ಕೌನ್ಸಿಲರ್ ಕುಶಾಲ್ನಗರದ ಸಂತೋಷ್ರ ದೂರಿನಂತೆ ಆವಿಯ ನಿವಾಸಿ ಶಂಸುದ್ದೀನ್ ಹಾಗೂ ಕಂಡರೆ ಪತ್ತೆಹಚ್ಚಬಹುದಾದ 20 ಮಂದಿ ಮುಸ್ಲಿಂ ಯೂತ್ ಲೀಗ್ ಕಾರ್ಯಕರ್ತರ ವಿರುದ್ಧ ಕೇಸು ದಾಖಲಿಸಲಾಗಿದೆ. ನಿನ್ನೆ ಮುಂಜಾನೆ ಘಟನೆ ನಡೆದಿದೆ. ಶಂಸುದ್ದೀನ್ ನೇತೃತ್ವದಲ್ಲಿ ಸ್ಥಳದಲ್ಲಿ ಬಸ್ ವೈಟಿಂಗ್ ಶೆಡ್ ಸ್ಥಾಪಿಸಿದ ಬಳಿಕ ಅವರೇ ಗಲಭೆಗೆ ಯತ್ನಿಸಿರುವುದಾಗಿ ಸಂತೋಷ್ ಕುಮಾರ್ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಇದೇ ವೇಳೆ ಆವಿಯದಎಂ.ವಿ.ಶಂಸುದ್ದೀನ್ ನೀಡಿದ ದೂರಿನಂತೆ ಹೊಸದುರ್ಗ ಪೊಲೀಸರು ಇನ್ನೊಂದು ಕೇಸು ದಾಖಲಿಸಿ ಕೊಂಡಿದ್ದಾರೆ. ಆವಿಯದಲ್ಲಿ ಮುಸ್ಲಿಂ ಲೀಗ್ ಸ್ಥಾಪಿಸಿದ ಬಸ್ ವೈಟಿಂಗ್ ಶೆಡ್ಗೆ ಕಿಚ್ಚಿಟ್ಟು ನಾಶಗೊಳಿಸಿ ಸ್ಥಳದಲ್ಲಿ ಗಲಭೆಗೆ ಪ್ರಯತ್ನಿಸಲಾಯಿ ತೆಂದು ಶಂಸುದ್ದೀನ್ ತಿಳಿಸಿದ್ದಾರೆ. 10 ಸಾವಿರ ರೂಪಾಯಿಗಳ ನಷ್ಟ ವುಂಟಾಗಿರುವುದಾಗಿಯೂ ದೂರಿನಲ್ಲಿ ತಿಳಿಸಲಾಗಿದೆ. ಎರಡೂ ದೂರಿನಂತೆ ಸಮಗ್ರ ತನಿಖೆ ಆರಂಭಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.






