ಕುಂಬಳೆ: ಕಳತ್ತೂರಿನಲ್ಲಿ ವ್ಯಾಪಾರಿಯ ಮನೆಯಿಂದ ಚಿನ್ನಾಭರಣ ಹಾಗೂ ಹಣ ಕಳವಿಗೀ ಡಾದ ಪ್ರಕರಣದಲ್ಲಿ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.
ಬೆಂಗಳೂರಿನಲ್ಲಿ ವ್ಯಾಪಾರಿಯಾಗಿರುವ ಕಳತ್ತೂರು ಪಂಜಿಕಲ್ಲಿನ ಯು.ಕೆ.ಯೂಸಫ್‌ರ ಮನೆಯಿಂದ ಕಳವು ನಡೆದಿದೆ. ಎರಡಂತಸ್ತಿನ ಮನೆಯ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು ಬೆಡ್ ರೂಂನ ಕಪಾಟುಗಳನ್ನು ತೆರೆದು 9 ಪವನ್ ಚಿನ್ನಾಭರಣ ಹಾಗೂ ಒಂದು ಲಕ್ಷ ರೂ. ದೋಚಿದ್ದಾರೆ. ಶನಿವಾರ ರಾತ್ರಿ 7 ಗಂಟೆಯಿಂದ ನಿನ್ನೆ ಬೆಳಿಗ್ಗೆ 7 ಗಂಟೆ ಮಧ್ಯೆ ಕಳವು ನಡೆದಿರುವುದಾಗಿ ಸಂಶಯಿಸಲಾಗಿದೆ. ವಿಷಯ ತಿಳಿದು ಕುಂಬಳೆ ಪೊಲೀಸರು ಸ್ಥಳಕ್ಕೆ ತಲುಪಿ ತನಿಖೆ ಆರಂಭಿಸಿದ್ದಾರೆ. ಬೆರಳಚ್ಚು ತಜ್ಞರು ಹಾಗೂ ಶ್ವಾನದಳ ತಲುಪಿ ಪರಿಶೀಲನೆ ನಡೆಸಿದೆ. ಬೆರಳಚ್ಚು ತಜ್ಞರು ನಡೆಸಿದ ಪರಿಶೀಲನೆಯಲ್ಲಿ ೭ ಬೆರಳಚ್ಚುಗಳು ಪತ್ತೆಯಾಗಿದೆ. ಶ್ವಾನದಳ ಮನೆಯಿಂದ ಅಲ್ಪ ದೂರದಲ್ಲಿ ಪೈಪ್‌ಲೈನ್ ಸ್ಥಾಪಿಸುವಲ್ಲಿವರೆಗೆ ಓಡಿ ನಿಂತಿದೆ. ಯೂಸಫ್‌ರ ಪತ್ನಿ ಫಾತಿಬಿ ಹಾಗೂ ಮೂವರು ಮಕ್ಕಳು ಈ ಮನೆಯಲ್ಲಿ ವಾಸಿಸುತ್ತಿದ್ದಾರೆ. ಶನಿವಾರ ಸಂಜೆ ಫಾತಿಬಿ ಇಬ್ಬರು ಮಕ್ಕಳೊಂದಿಗೆ ಪತಿಯ ಸಹೋದರನ ಮನೆಗೆ ಹೋಗಿದ್ದರು. ಇನ್ನೋರ್ವೆ ಪುತ್ರಿ ಶಿಫಾ ರಾತ್ರಿ 7.30ರ ವರೆಗೆ ಮನೆಯಲ್ಲಿದ್ದಳು. ಅನಂತರ ಆಕೆ ಬಾಗಿಲು ಮುಚ್ಚಿ ಅಲ್ಪ ದೂರದಲ್ಲಿರುವ ಸಂಬಂಧಿಕರ ಮನೆಗೆ ತೆರಳಿದ್ದರು. ನಿನ್ನೆ ಬೆಳಿಗ್ಗೆ 7 ಗಂಟೆ ವೇಳೆ ಶಿಫಾ ಮನೆಗೆ ತಲುಪಿದಾಗ ಬಾಗಿಲು ಮುರಿದಿ ರುವುದು ಕಂಡುಬಂದಿದೆ. ಒಳಗೆ ಪ್ರವೇಶಿಸಿ ನೋಡಿದಾಗ ಕಪಾ ಟುಗಳನ್ನು ತೆರೆದು ಚೆಲ್ಲಾಪಿಲ್ಲಿಗೊಳಿಸಿ ನಗ-ನಗದು ದೋಚಿರುವುದು ಕಂಡುಬಂದಿದೆ.






