ಕಾಸರಗೋಡು: ಸೈಕಲ್ನಲ್ಲಿ ಹೋಗುತ್ತಿದ್ದ ಹತ್ತರ ಹರೆಯದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಲೆತ್ನಿಸಿದ ಪ್ರಕರಣದ ಆರೋಪಿಯನ್ನು ಕಾಸರಗೋಡು ಮಹಿಳಾ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಕೆ. ಅಜಿತ್ ಮತ್ತು ಜಿಲ್ಲಾ ಕ್ರೈಂ ಸ್ಕ್ವಾಡ್ ನೇತೃತ್ವದ ತಂಡ ಬಂಧಿಸಿದೆ. ಪಯ್ಯನ್ನೂರು ವೆಳ್ಳೂರು ಮೂಪನ್ನ ಡಗತ್ತ್ ವೀಟಿಲ್ ಫಿರ್ದೌಸ್ (36) ಬಂಧಿತ ಆರೋಪಿ. ಬಂಧಿತನನ್ನು ನ್ಯಾಯಾಂಗ ಬಂಧನದಲ್ಲಿರಿಸಲಾ ಗಿದೆ. ಬಾಲಕಿಗೆ ಕಿರುಕುಳ ನೀಡಲೆತ್ನಿಸಿದ ವ್ಯಕ್ತಿ ಯಾರೆಂಬುವು ದನ್ನು ಗುರುತುಹಚ್ಚಲು ಪೊಲೀಸರಿಗೆ ಮೊದಲು ಸಾಧ್ಯವಾಗಿರಲಿಲ್ಲ. ಬಳಿಕ ಘಟನೆ ನಡೆದ ಪರಿಸರದ ಸಿಸಿ ಟಿವಿ ದೃಶ್ಯಗಳನ್ನು ಪೊಲೀಸರು ಪರಿಶೀಲಿಸಿ ದಾಗ ಆರೋಪಿಯ ಗುರುತು ಹಚ್ಚಲು ಸಾಧ್ಯವಾಗಿದೆ. ಬಂಧಿತ ಆರೋಪಿ ವಿರುದ್ಧ ಇದೇ ರೀತಿಯ ಪ್ರಕರಣಗಳು ಹೊಸದುರ್ಗ ಮತ್ತು ಪೆರಿಂಙೋ ಪೊಲೀಸ್ ಠಾಣೆಗಳಲ್ಲಿ ಇದೆಯೆಂದು ಪೊಲೀಸರು ತಿಳಿಸಿ ದ್ದಾರೆ. ಕಾಸರಗೋಡು ಎಎಸ್ಐ ಅಚ್ಯುತ್ ಅಶೋಕ್ರ ಮೇಲ್ನೋಟ ದಲ್ಲಿ ಈ ಪ್ರಕರಣದ ತನಿಖೆ ನಡೆದಿತ್ತು. ತನಿಖಾ ತಂಡದಲ್ಲಿ ಸಿಪಿಒ ಸು ಮೋಳ್ ಕೂಡಾ ಒಳಗೊಂಡಿದ್ದರು.






