ಯುಡಿಎಫ್ ತೊರೆದು ಬಿಜೆಪಿಗೆ ಸೇರಿದವರಿಗೆ ಸ್ವಾಗತ

ಮಂಜೇಶ್ವರ: ಯುಡಿಎಫ್ ಮುಖಂಡ, ಮಂಜೇಶ್ವರ ಪಂಚಾಯತ್ ಮಾಜಿ ಸದಸ್ಯನಾಗಿದ್ದ ರಾಘವ ಮಂಜೇಶ್ವರ ಹಾಗೂ  ಪೈವಳಿಕೆ ನಿವಾಸಿ ಅಬ್ದುಲ್ ಸಮದ್ ಬಿಜೆಪಿ ಸದಸ್ಯತನ ಸ್ವೀಕರಿಸಿದ್ದಾರೆ. ಎನ್‌ಡಿಎ ಅಭ್ಯರ್ಥಿ ಕೆ. ಸುರೇಂದ್ರನ್ ಇವರಿಗೆ ಬಿಜೆಪಿ ಸದಸ್ಯತನ ನೀಡಿ ಪಕ್ಷಕ್ಕೆ ಸ್ವಾಗತಿಸಿದರು. ಈ ವೇಳೆ ಮಂಡಲ ಅಧ್ಯಕ್ಷ ಆದರ್ಶ್ ಬಿ.ಎಂ, ಮುಖಂಡರಾದ ನವೀನ್‌ರಾಜ್, ಯಾದವ ಬಡಾಜೆ, ಸುರೇಶ್ ಮಂಜೇಶ್ವರ, ಸಲೀಂ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

You cannot copy contents of this page