ಸ್ಕೂಟರ್‌ನಿಂದ ಎಸೆಯಲ್ಪಟ್ಟು ಗಾಯಗೊಂಡಿದ್ದ ಮಹಿಳೆ ಮೃತ್ಯು

ಹೊಸದುರ್ಗ: ಸ್ಕೂಟರ್‌ನಿಂದ ಎಸೆಯಲ್ಪಟ್ಟು ಗಂಭೀರ ಗಾಯಗೊಂಡು ಚಿಕಿತ್ಸೆಯಲ್ಲಿದ್ದ ಯುವತಿ ಮೃತಪಟ್ಟರು. ಅಂಬಲತ್ತರ ಪರಕ್ಕಳಾಯಿ ವಲಿಯಡ್ಕದ ಪಿ. ಕುಂಞಂಬುರ ಪತ್ನಿ ಶೋಭ (48) ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಪತಿಯ ಸಹೋದರ ಅರ್ಜುನ್ ಚಲಾಯಿಸುತ್ತಿದ್ದ ಸ್ಕೂಟರ್‌ನ ಹಿಂಬದಿಯಲ್ಲಿ ಕುಳಿತು ಪ್ರಯಾಣಿಸುತ್ತಿದ್ದ ಮಧ್ಯೆ ಸೋಮವಾರ ಇರಿಯ ಲಾಲೂರಿನಲ್ಲಿ ಅಪಘಾತ ಸಂಭವಿಸಿತ್ತು. ಮಕ್ಕಕ್ಕೋಡನ್ ಕಣ್ಣನ್- ಮೂಳನೇ ವೀಟಿಲ್ ನಾರಾಯಣಿ ದಂಪತಿ ಪುತ್ರಿಯಾಗಿದ್ದಾರೆ ಶೋಭಾ. ಮೃತರು ಮಕ್ಕಳಾದ ಶರತ್, ಶರಣ್ಯ, ಅಳಿಯ ಅನೂಪ್, ಸಹೋದರ ಬಾಬು, ಸಹೋದರಿಯರಾದ ಶ್ಯಾಮಲ, ಉಷಾ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

RELATED NEWS

You cannot copy contents of this page