ಪಂಚಾಯತ್ ನಿವೃತ್ತ ಕಾರ್ಯದರ್ಶಿ ನಿಧನ

ಮಂಜೇಶ್ವರ: ಹೊಸಂಗಡಿ ಬಳಿಯ ಅಂಗಡಿಪದವು ನಿವಾಸಿ, ಮಂಜೇಶ್ವರ ಪಂಚಾಯತ್ ನಿವೃತ್ತ ಕಾರ್ಯದರ್ಶಿ ಮಹಾಬಲ ಭಟ್ (85) ಶನಿವಾರ ಮಧ್ಯಾಹ್ನ ಸ್ವ-ಗೃಹದಲ್ಲಿ ನಿಧನ ಹೊಂದಿದರು. ಇವರು ಬದಿಯಡ್ಕ, ಪುತ್ತಿಗೆ ಸಹಿತ ವಿವಿಧ ಪಂಚಾಯತ್‌ಗಳಲ್ಲಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿ ಮಂಜೇಶ್ವರ ಪಂಚಾಯತ್‌ನಲ್ಲಿ ನಿವೃತ್ತಿ ಹೊಂದಿದ್ದಾರೆ. ಕೆ.ಎಸ್.ಎಸ್.ಪಿ.ಯು ಮಂಜೇಶ್ವರ ಘಟಕದ ಸದಸ್ಯರಾಗಿದ್ದರು. ಮೃತರು ಪತ್ನಿ ರೇವತಿ, ಮಕ್ಕಳಾದ ಗಣೇಶ, ಪಾರ್ವತಿ, ಅಳಿಯ ನ್ಯಾಯವಾದಿ ಕೃಷ್ಣಮೂರ್ತಿ, ಸಹೋದರ ಸಹೋದರಿಯರಾದ ಸದಾಶಿವ ಭಟ್, ಲಕ್ಷಿ÷್ಮÃ, ಶಂಕರಿ, ಶಾರದಾ ಹಾಗೂ ಅಪಾರ ಬಂಧು ಬಳಗ ವನ್ನು ಅಗಲಿದ್ದಾರೆ. ಸೊಸೆ ಪುಷ್ಪ ಈ ಹಿಂದೆ ನಿಧನ ಹೊಂದಿದ್ದಾರೆ. ಮೃತರ ಮನೆಗೆ ಕೆ.ಎಸ್.ಎಸ್.ಪಿ.ಯು ಸಂಘಟನೆಯ ಪದಾಧಿಕಾರಿಗಳಾದ ಶೀನಪ್ಪ ಪೂಜಾರಿ ಅಲಾರ್ ದುರ್ಗಿಪಳ್ಳ, ಉದಯ ಶಂಕರ ಭಟ್, ಭಾಸ್ಕರ್ ರಾವ್ ಕೆಡೆಂಜಿ, ಪುಂಡಲೀಕ ಮಾಸ್ತರ್, ಕೊಡಂಗೆ ಸುಬ್ಬಣ್ಣ ಭಟ್ ಮೊದಲಾದವರು ಭೇಟಿ ನೀಡಿ ಅಂತಿಮನಮನ ಸಲ್ಲಿಸಿದರು.

You cannot copy contents of this page