ಕುಂಬಳೆ: ಜೋಡುಕಲ್ಲಿನಲ್ಲಿ ಸಾರ್ವಜನಿಕ ಗಣೇಶೋತ್ಸವ ಸ್ಥಳಕ್ಕೆ ಸಂಬಂಧಿಸಿದ ವಿಷಯದಲ್ಲಿ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಲೋಕೇಶ್ ನೋಂಡ ಅವರ ಮೇಲೆ ನಡೆದಿರುವ ಅಸಭ್ಯ ವರ್ತನೆ ಖಂಡನೀಯವೆಂದು ಬಿಜೆಪಿ ಕುಂಬಳೆ ಮಂಡಲ ಸಮಿತಿ ಅಧ್ಯಕ್ಷ ಬಿ. ವಿಕ್ರಂ ಪೈ ತಿಳಿಸಿದ್ದಾರೆ.
ಜೋಡುಕಲ್ಲು ಶಿಶು ಮಂದಿರದ ಸಮೀಪದಲ್ಲಿರುವ ಈ ಸ್ಥಳಕ್ಕೆ ಸಂಬಂಧಿಸಿದ ವಿಷಯದ ಕರಿತು ಲೋಕೋಪಯೋಗಿ ಇಲಾಖೆಯ ಕಚೇರಿಗೆ ಅರ್ಜಿ ಸಲ್ಲಿಸಲು ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಲೋಕೇಶ್ ನೋಂಡಾ ತೆರಳಿದ್ದ ಸಂದಭದಲ್ಲಿ ಅಲ್ಲಿ ಮುಸ್ಲಿಂ ಲೀಗ್ ಕಾರ್ಯಕರ್ತರು ನಡೆಸುತ್ತಿದ್ದ ಪ್ರತಿಭಟನಯ ನಡುವೆ ಅವರೊಂದಿಗೆ ಅಸಭ್ಯವಾಗಿ ವರ್ತಿಸಿ, ಅವರ ಅಂಗಿಯ ಕಾಲರ್ ಹಿಡಿದು ಮೈಗೆ ಕೈ ಹಾಕಿರುವ ಘಟನೆ ನಡೆದಿದೆ. ಈ ಘಟನೆಗೆ ಸಂಬಂಧಿಸಿದ ದೃಶ್ಯಗಳು ವೀಡಿಯೋದಲ್ಲಿ ಸ್ಪಷ್ಟವಾಗಿ ಕಾಣಿಸುತ್ತಿವೆ. ಮುಸ್ಲಿಂ ಲೀಗ್ ಈ ರೀತಿಯ ಕೃತ್ಯವನ್ನು ನಿರಂತರ ನಡೆಸುತ್ತಿದ್ದು ಅದರ ಹಿಂದೆ ಕೆಲವು ಉಗ್ರ ಅಜೆಂಡಾಗಳು ಅಡಗಿದೆ. ಮುಸ್ಲಿಂ ಲೀಗ್‌ನ ಇಂತಹ ಕ್ರಮಗಳು ಖಂಡನೀಯವಾಗಿದೆ.
ಈ ಸ್ಥಳಕ್ಕೆ ಸಂಬಂಧಿಸಿದ ದಾಖಲೆಗಳು ಮತ್ತು ಹಿಂದಿನ ಮನವಿಗಳು ನಮ್ಮ ಬಳಿ ಲಭ್ಯವಿದೆ. ೧೯೯೧ರಲ್ಲಿಯೂ ಈ ಸ್ಥಳವನ್ನು ಸೇವಾ ಭಾರತಿಗೆ ಸಂಬಂಧಿಸಿದ ಚಟುವಟಿಕೆಗಳಿಗೆ ನೀಡಬೇಕು ಎಂಬುದಾಗಿ ತಹಶೀಲ್ದಾರ್ ಹಾಗೂ ಗ್ರಾಮ ಕಚೇರಿಗೆ ಮನವಿಗಳನ್ನು ಸಲ್ಲಿಸಲಾಗಿತ್ತು. ಇದಕ್ಕೆ ಸಂಬಂಧಿಸಿದ ದಾಖಲೆಗಳು ನಮ್ಮ ಬಳಿ ಇವೆ. ಆದರೆ ಇದೀಗ ಈ ಸ್ಥಳವನ್ನು ಅತಿಕ್ರಮಣದ ಮೂಲಕ ವಶಪಡಿಸಿಕೊಳ್ಳಲು ಕೆಲವು ಸಂಘಟನೆಗಳು ಪ್ರಯತ್ನಿಸುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ನಿರಂತರವಾಗಿಈ ವಿಚಾರದಲ್ಲಿ ಅಡ್ಡಿಪಡಿಸುವ ಪ್ರಯತ್ನಗಳು ನಡೆಯುತ್ತಿರುವುದು ನಾವು ಗಂಭೀರವಾಗಿ ಪರಿಗಣಿಸುತ್ತೇವೆ.
ಮುಂದಿನ ದಿನಗಳಲ್ಲಿ ಮುಸ್ಲಿಂ ಲೀಗ್ ಹಾಗೂ ಯಾವುದೇ ಸಂಘಟನೆಯಾಗಿರಲಿ, ನಮ್ಮ ಧಾರ್ಮಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಅಡ್ಡಿಪಡಿಸುವ ಅಥವಾ ನಮ್ಮ ಕಾರ್ಯಕರ್ತರಿಗೆ ತೊಂದರೆ ನೀಡುವ ಯಾವುದೇ ಪ್ರಯತ್ನವನ್ನು ನಾವು ಕಾನೂನುಬದ್ಧವಾಗಿ ಹಾಗೂ ಪ್ರಜಾಸ ತ್ತಾತ್ಮಕ ರೀತಿಯಲ್ಲಿ ಎದುರಿಸುತ್ತೇವೆ
ಈ ವಿಚಾರವನ್ನು ಸಣ್ಣ ಘಟನೆ ಎಂದು ಪರಿಗಣಿಸಿ ಕೈಬಿಡಲು ನಾವು ಸಿದ್ಧರಿಲ್ಲ. ಸ್ಥಳದ ಹಕ್ಕು, ದಾಖಲೆಗಳು ಮತ್ತು ಸಾರ್ವಜನಿಕ, ಧಾರ್ಮಿಕ ಕಾರ್ಯಕ್ರಮಗಳ ನಿರಂತರತೆಗೆ ಸಂಬಂಧಿಸಿದಂತೆ ಅಗತ್ಯವಿರುವ ಎಲ್ಲಾ ಕಾನೂನುಬದ್ಧ ಹೋರಾಟವನ್ನು ಮುಂದುವರಿಸುತ್ತೇವೆ.
ಲೋಕೇಶ್ ನೋಂಡಾ ಅವರಿಗೆ ಭಾರತೀಯ ಜನತಾ ಪಕ್ಷ ಕುಂಬಳೆ ಮಂಡಲ ಸಮಿತಿಯ ಸಂಪೂರ್ಣ ಬೆಂಬಲವಿದೆ. ಅವರೊಂದಿಗೆ ನಾವೆಲ್ಲರೂ ನಿಂತು, ಆ ವಿಚಾರದಲ್ಲಿ ಮಂದಿನ ದಿನಗಳಲ್ಲಿ ಅಗತ್ಯವಾದ ಹೋರಾಟವನ್ನು ನಡೆಸುತ್ತೇವೆ.
ಈ ವಿಷಯವನ್ನು ಸಾರ್ವಜನಿಕರ ಗಮನಕ್ಕೆ ತರುತ್ತಿದ್ದು, ಶಾಂತಿ ಮತ್ತು ಕಾನೂನು ಸುವ್ಯವಸ್ಥೆಯನ್ನು ಕಾಪಾಡಿಕೊಂಡು ನಮ್ಮ ಹಕ್ಕುಗಳಿಗಾಗಿ ಪ್ರಜಾಸತ್ತಾತ್ಮಕ ರೀತಿಯಲ್ಲಿ ಹೋರಾಟ ನಡೆಸುವುದಾಗಿ ಬಿ. ವಿಕ್ರಂ ಪೈ ತಿಳಿಸಿದ್ದಾರೆ.






