ಉಪ್ಪಳ: ಗಣೇಶೋತ್ಸವ ಸಮೀಪಿಸಿರುವಂತೆ ಬಾಯಾರುನಲ್ಲಿ ಗಣಪತಿ ವಿಗ್ರಹ ರಚನೆ ಭರದಿಂದ ನಡೆಯುತ್ತಿದೆ. ಈ ತಿಂಗಳ ೧೪ರಂದು ಶ್ರೀ ಗಣೇಶೋತ್ಸವ ನಡೆಯಲಿದೆ. ಬಾಯಾರು ಶ್ರೀ ಪಂಚಲಿAಗೇಶ್ವರ ದೇವಸ್ಥಾನ ಬಳಿಯ ನಿವಾಸಿ ದಿ| ಕೃಷ್ಣಪ್ಪ ಆಚಾರ್ಯರ ಮಕ್ಕಳಾದ ಮಹೇಶ ಹಾಗೂ ಭರತ್ ಸಹೋದರರು ಮನೆಯಲ್ಲಿ ಗಣಪತಿ ವಿಗ್ರಹ ತಯಾರಿಸುತ್ತಿದ್ದಾರೆ. ಈ ವರ್ಷ ಒಟ್ಟು ೫೦ ಗಣಪತಿ ವಿಗ್ರಹ ಸಿದ್ದವಾಗುತ್ತಿದೆ. ಬಾಯಾರು, ಜೋಡುಕಲ್ಲು, ಪ್ರತಾಪನಗರ, ಹೊಸಂಗಡಿ, ಮಿತ್ತನಡ್ಕ, ಸುಂಕದಕಟ್ಟೆ, ನೀಲೇಶ್ವರ , ಕರ್ನಾಟಕದ ಬೆಂಗಳೂರು, ಮಡಿಕೇರಿ ಸಹಿತ ವಿವಿಧ ಕಡೆಗಳಲ್ಲಿ ಪೂಜಿಸುವ ಗಣಪತಿ ವಿಗ್ರಹ ಸಿದ್ದಗೊಳ್ಳುತ್ತಿದೆ. ಸಾರ್ವಜನಿಕ ಹಾಗೂ ಮನೆಗಳಲ್ಲಿ ಪೂಜಿಸುತ್ತಿರುವ ಗಣಪತಿ ವಿಗ್ರಹ ಒಳಗೊಂಡಿದೆ. ಕಳೆದ ೪೦ ವರ್ಷಗಳಿಂದ ವಿಗ್ರಹ ರಚನೆಯಲ್ಲಿ ತೊಡಗಿದ್ದಾರೆ. ಕಾಸರಗೋಡಿನ ಲಕ್ಷಿ÷್ಮÃಶ ಆಚಾರ್ಯರಿಂದ ಗಣಪತಿ ವಿಗ್ರಹ ಸಹಿತ ಚಿತ್ರ ರಚನೆಯನ್ನು ಮಹೇಶ ಕಲಿತಿದ್ದಾರೆ.






