ನರೇಂದ್ರಮೋದಿಯವರ ಸಾರ್ವಜನಿಕ ಜೀವನದ 25 ವರ್ಷಗಳು ಇಂದಿನಿಂದ ಒಂದು ತಿಂಗಳ ಕಾಲ ಜಿಲ್ಲೆಯಲ್ಲಿ ವಿವಿಧ ಕಾರ್ಯಕ್ರಮ

ಕಾಸರಗೋಡು: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿ 25 ವರ್ಷಗಳು ಪೂರ್ಣ ಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ರಾಷ್ಟ್ರೀ ಯ ಮಟ್ಟದಲ್ಲಿ ಆಯೋಜಿಸಲಾ ಗುತ್ತಿರುವ ‘ಸೇವಾ ಸಂಕಲ್ಪ ಅಭಿಯಾನ್’ದ ಅಂಗ ವಾಗಿ ಇಂದಿ ನಿಂದ ಅಕ್ಟೋಬರ್ 17ರವರೆಗೆ ಕಾಸರ ಗೋಡು ಜಿಲ್ಲೆಯಲ್ಲಿ ವಿವಿಧ ಕಾರ್ಯ ಕ್ರಮಗಳನ್ನು ಆಯೋಜಿಸಲಾಗುವುದು.
ನರೇಂದ್ರ ಮೋದಿಯವರ ಜನ್ಮದಿನವಾದ ಇಂದು ಜಿಲ್ಲೆಯ ವಿವಿಧ ದೇವಸ್ಥಾನಗಳಲ್ಲಿ ಆಯುರಾರೋಗ್ಯ ಕ್ಕಾಗಿ ಪೂಜೆ ಹಾಗೂ ವಿಶೇಷ ಹರಕೆಗಳನ್ನು ಸಲ್ಲಿಸಲಾಗುತ್ತಿದೆ. ‘ಆಶೀರ್ವಾದ್ ಕಾ ದಿಯಾ’ ಅಭಿಯಾನದ ಭಾಗವಾಗಿ ಕೇಂದ್ರ ಸರ್ಕಾರದ ಯೋಜನೆಗಳ ಫಲಾ ನುಭವಿಗಳು ಹಾಗೂ ಕಾರ್ಯಕರ್ತರ ಮನೆಗಳು ಮತ್ತು ಸಂಸ್ಥೆಗಳಲ್ಲಿ ದೀಪ ಬೆಳಗಿಸಲಾಗುವುದು.
ಸೆ. 17ರಿಂದ ಅಕ್ಟೋಬರ್ 7ರವರೆಗೆ ಜಿಲ್ಲೆಯ ವಿವಿಧ ಶಾಲೆಗಳಲ್ಲಿ ಚಿತ್ರಕಲೆ ಹಾಗೂ ಭಾಷಣ ಸ್ಪರ್ಧೆಗಳನ್ನು ಆಯೋಜಿಸಲಾಗು ವುದು. ‘ಸ್ವಪ್ನ ಭಾರತ’, ‘ವಿಕಸಿತ ಭಾರತ 2047’ ಮುಂತಾದ ವಿಷಯಗಳನ್ನು ಆಧರಿಸಿ 1ರಿಂದ 7ನೇ ತರಗತಿಯ ವಿದ್ಯಾರ್ಥಿ ಗಳಿಗೆ ಚಿತ್ರಕಲೆ ಸ್ಪರ್ಧೆ ಹಾಗೂ 8ನೇ ತರಗತಿಯಿಂದ ಪ್ಲಸ್ ಟು ವರೆಗಿನ ವಿದ್ಯಾರ್ಥಿಗಳಿಗೆ ಚಿತ್ರಕಲೆ ಮತ್ತು ಭಾಷಣ ಸ್ಪರ್ಧೆಗಳನ್ನು ನಡೆಸಲಾಗು ವುದು. ನರೇಂದ್ರ ಮೋದಿ ಯವರ ಸಾರ್ವಜನಿಕ ಜೀವನ ಹಾಗೂ ಕಾರ್ಯಚಟುವಟಿಕೆಗಳನ್ನು ಆಧರಿಸಿ ಬೀದಿ ನಾಟಕಗಳನ್ನೂ ಆಯೋಜಿಸ ಲಾಗುವುದು.
ಸೆಪ್ಟೆಂಬರ್ 25ರಿಂದ ಅಕ್ಟೋ ಬರ್ 7ರ ನಡುವೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಹಾಗೂ ಮಹಿಳಾ ಮೋರ್ಚಾ ಸಂಯುಕ್ತವಾಗಿ ‘ಅಂಗನವಾಡಿ ಉತ್ಸವ’ ಆಯೋಜಿಸಲಿದೆ. ಇದರ ಅಂಗವಾಗಿ ಅಂಗನವಾಡಿ ಸಿಬ್ಬಂದಿ ಹಾಗೂ ಆಶಾ ಕಾರ್ಯಕತೆಯರನ್ನು ಸನ್ಮಾನಿಸ ಲಾಗುವುದು.
‘ಬದಲಾವಣೆಯ ನೇರ ನೋಟ’ ಎಂಬ ಹೆಸರಿನಲ್ಲಿ ವಿವಿಧ ಕೇಂದ್ರ ಸರ್ಕಾರದ ಯೋಜನೆಗಳು ಹಾಗೂ ಅವು ಫಲಾನುಭವಿಗಳ ಜೀವನದಲ್ಲಿ ಸೃಷ್ಟಿಸಿರುವ ಬದಲಾವಣೆಗಳನ್ನು ಪರಿಚಯಿಸುವ ಸಾಮಾಜಿಕ ಮಾಧ್ಯಮ ರೀಲ್ಸ್ಗಳನ್ನು ಸಿದ್ಧಪಡಿಸಿ ಪ್ರಚಾರ ಮಾಡಲಾಗುವುದು.
ಅಕ್ಟೋಬರ್ 7ರಂದು ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ 25ನೇ ವಾರ್ಷಿಕೋತ್ಸವದ ಅಂಗವಾಗಿ ಪ್ರತಿಯೊಂದು ಬೂತ್ನಿಂದ ‘ಸೇವಾ ಜ್ಯೋತಿ ಕಲಶ ಯಾತ್ರೆ’ ಆಯೋಜಿಸಲಾಗುವುದು. ಯಾತ್ರೆಗಳು ಸಂಘಟನಾ ಮಂಡಲ ಕೇಂದ್ರಗಳಲ್ಲಿ ಸಂಗಮಿಸಿದ ಬಳಿಕ 10 ಸಂಘಟನಾ ಮಂಡಲಗಳಿAದ ದ್ವಿಚಕ್ರ ವಾಹನ ರ‍್ಯಾಲಿಗಳು ಜಿಲ್ಲಾ ಕೇಂದ್ರವನ್ನು ತಲುಪಲಿವೆ. ದೇಶದ ವಿವಿಧ ಬಿಜೆಪಿ ಜನಪ್ರತಿನಿಧಿಗಳು ಭಾಗವಹಿಸುವ ‘ಸೇವಾ ಮಹಾಕುಂಭ್’ ಕಾರ್ಯಕ್ರಮ ದಲ್ಲೂ ಜಿಲ್ಲೆಯ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
‘ಸೇವಾ ಸೇತು ಅಭಿಯಾನ್-ವಿಕಸಿತ ಕೇರಳ’ ಯೋಜನೆಯ ಅಂಗವಾಗಿ ಬಿಜೆಪಿ ಕಾಸರಗೋಡು ಜಿಲ್ಲಾ ಸಹಾಯವಾಣಿ, ವಿವಿಧ ಸರ್ಕಾರಿ, ಖಾಸಗಿ ಹಾಗೂ ಎನ್ಜಿಒ ಸಂಸ್ಥೆಗಳ ಸಹಕಾರದೊಂದಿಗೆ ವಾರ್ಡ್ ಮಟ್ಟದಲ್ಲಿ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳಿಗೆ ನೋಂದಣಿ ಶಿಬಿರಗಳನ್ನು ಆಯೋಜಿಸಲಿದೆ.
ಕೇಂದ್ರ ಸರ್ಕಾರದ ವಿವಿಧ ಯೋಜನೆಗಳು ಹಾಗೂ ಅವುಗಳ ಪ್ರಯೋಜನಗಳನ್ನು ಪರಿಚಯಿಸುವ ಚಿತ್ರ-ವಿಡಿಯೋ ಪ್ರದರ್ಶನಗಳೊಂದಿಗೆ ಎಕ್ಸಿಬಿಷನ್ಗಳನ್ನೂ ಆಯೋ ಜಿಸ ಲಾಗುವುದು. ಯುವಜನರನ್ನು ಕೇಂದ್ರೀಕರಿಸಿ ‘ಸೇವಾ ಫಾಸ್ಟ್ ಇನ್ನೋವೇಶನ್’, ರಾಷ್ಟ್ರೀಯ ಸೆಮಿನಾರ್, ರಕ್ತದಾನ ಶಿಬಿರಗಳು ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಇದರ ಭಾಗವಾಗಿ ಆಯೋಜಿಸ ಲಾಗುವುದು ಎಂದು ಬಿಜೆಪಿ ಕಾಸರಗೋಡು ಜಿಲ್ಲಾ ಅಧ್ಯಕ್ಷ ಎಂ.ಎಲ್. ಅಶ್ವಿನಿ ತಿಳಿಸಿದ್ದಾರೆ.

RELATED NEWS

You cannot copy contents of this page