ಕಾಸರಗೋಡು: ವಿದೇಶದಲ್ಲಿ ಕೆಲಸ ನೀಡುವುದಾಗಿ ನಂಬಿಸಿ 4,84,200 ರೂ. ಪಡೆದು ಬಳಿಕ ವಂಚನೆಗೈದ ಬಗ್ಗೆ ನೀಡಲಾದ ದೂರಿನಂತೆ ವಿದ್ಯಾನಗರ ಪೊಲೀಸರು ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ
ಮಧೂರು ಹಿದಾಯತ್ ನಗರದ ರಿಶಾದ್ ಮಂಜಿಲ್ನ ಅಬ್ದುಲ್ ರೌಫ್ (45) ಎಂಬವರು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು ಅದರಂತೆ ಕೊಲ್ಲಂ ಸಿಟಿಯ ಚಾಲಕುಡಿ ನಿವಾಸಿಗಳಾದ ಶ್ಯಾಮ ಸುಕುಮಾರನ್ ನಾಯರ್ ಮತ್ತು ಗೈಸ್ ಬೋಬಿ ಎಂಬಿವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂ ಡಿದ್ದಾರೆ.ಯು.ಕೆಯಲ್ಲಿ ಬಾರ್ ಚೆಸ್ಟರ್ ಹೆಲ್ತ್ ಕೇರ್ ಲಿಮಿಟೆಡ್ ಎಂಬ ಸಂಸ್ಥೆಯಲ್ಲಿ ಉದ್ಯೋಗ ನೀಡು ವುದಾಗಿ ನಂಬಿಸಿ ಆರೋಪಿಗಳಿಬ್ಬರು 2025 ಸೆಪ್ಟಂಬರ್ 30ರಿಂದ 2026 ಜೂನ್ 10 ನಡುವಿನ ಅವಧಿಯಲ್ಲಿ ನನ್ನ ಬ್ಯಾಂಕ್ ಖಾತೆಯಿಂದ ಹಲವು ಬಾರಿಯಾಗಿ ಒಟ್ಟು 4,84,200 ರೂ. ಪಡೆದು ನಂತರ ಕೆಲಸವನ್ನಾಗಲೀ, ನೀಡಿದ ಹಣವನ್ನಾಗಲೀ ಹಿಂತಿರುಗಿಸದೆ ವಂಚನೆಗೈದಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಅಬ್ದುಲ್ ರೌಫ್ ಆರೋಪಿಸಿದ್ದಾರೆ.






