ಮನೆಯಲ್ಲಿ ಮದ್ಯ ಸಂಗ್ರಹ ಪತ್ತೆ: ರಿಪೋರ್ಟರ್ ಟಿವಿ ಮಾಲಕ ಸೆರೆ

ಕೊಚ್ಚಿ:  ಮನೆಯಲ್ಲಿ ಮದ್ಯ ಸಂಗ್ರಹಿಸಿಟ್ಟ ಘಟನೆಗೆ ಸಂಬಂಧಿಸಿ ರಿಪೋರ್ಟರ್ ಟಿ.ವಿ ಮಾಲಕ  ಆಂಟೋ ಅಗಸ್ಟಿನ್‌ರನ್ನು ಅಬಕಾರಿ ತಂಡ ಬಂಧಿಸಿದೆ. ಮನೆಯಿಂದ 64 ಲೀಟರ್ ಮದ್ಯ  ವಶಪಡಿಸಲಾಗಿದೆ. ವಯನಾಡ್ ವಾಳಮಟ್ಟ ಎಂಬಲ್ಲಿ ರುವ ಮನೆಯಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಮದ್ಯ ಸಂಗ್ರಹಿಸಿಟ್ಟಿರುವುದು ಪತ್ತೆಹಚ್ಚಲಾ ಗಿದೆ.  ಎಕ್ಸೈಸ್ ಎ.ಸಿ ಬೈಜು ನೇತೃತ್ವದ ತಂಡ ಆಂಟೋ ಅಗಸ್ಟಿನ್‌ರನ್ನು ಕೊಚ್ಚಿಯ ಕಚೇರಿಗೆ ತಲುಪಿಸಿ  ಬಂಧನ ದಾಖಲಿಸಿದೆ. ಅನಂತರ ವೈದ್ಯಕೀಯ ತಪಾಸಣೆಗಾಗಿ ಆಲುವಾದ ಜಿಲ್ಲಾಸ್ಪತ್ರೆಗೆ ಕೊಂಡೊ ಯ್ಯಲಾಯಿತು. ಆಂಟೋರನ್ನು ವಯನಾಡಿಗೆ ಕರೆದೊಯ್ಯುವುದಾಗಿ ಎಕ್ಸೈಸ್ ಎಸಿ  ತಿಳಿಸಿದ್ದಾರೆ.

RELATED NEWS

You cannot copy contents of this page