ನಯಾಬಜಾರ್ ಕಾಲುದಾರಿಯಲ್ಲಿ ತೂತು : ಕಾಲ್ನಡೆ ಪ್ರಯಾಣಿಕರಿಗೆ ಅಪಾಯ ಸಾಧ್ಯತೆ

ಉಪ್ಪಳ: ಕಾಲುದಾರಿಯಲ್ಲಿನ ಕಬ್ಬಿಣದ ಮುಚ್ಚಳದ ತೂತು ಪಾದಚಾರಿಗಳಲ್ಲಿ ಆತಂಕ ಉಂಟುಮಾಡುತ್ತಿದೆ. ತಲಪಾಡಿ ಕಾಸರಗೋಡು ಸರ್ವೀಸ್ ರಸ್ತೆಯ ನಯÁಬಜಾರ್-ಕೈಕಂಬ ಮಧ್ಯೆ ಕಾಲುದಾರಿಯಲ್ಲಿ ಹೊಂಡಕ್ಕೆ ಮುಚ್ಚಲಾದ ಕಬ್ಬಿಣದ ಮುಚ್ಚಳದಲ್ಲಿ ತೂತು ಕಂಡುಬAದಿದ್ದು, ಈ ದಾರಿಯಾಗಿ ಸಂಚರಿಸುವ ಪಾದಚಾರಿಗಳಾದ ಮಕ್ಕಳಿಗೆ ಅಪಾಯ ಕಾದಿದೆ. ಮಕ್ಕಳು ನಡೆದಾಡುವ ವೇಳೆ ಕಾಲು ಅದರೊಳಗೆ ಸಿಲುಕುವ ಸಾಧ್ಯತೆಯಿದ್ದು, ಅಲ್ಲದೆ ಯಾವುದಾರೂ ವಸ್ತುಗಳು ಹೊಂಡದೊಳಗೆ ಬೀಳಬಹು ದಾಗಿದೆ. ಈ ಮುಚ್ಚಳದಲ್ಲಿರುವ ಅಪಾ ಯದ ತೂತನ್ನು ದುರಸ್ತಿ ಗೊಳಿಸದಿದ್ದರೆ ಅಥವಾ ಬದಲಾಯಿಸದಿದ್ದಲ್ಲಿ ಅಪಾಯಕ್ಕೆ ಸಾಧ್ಯತೆಯಿರುವುದಾಗಿ ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ. ದುರಂತ ಸಂಭವಿಸುವ ಮೊದಲೇ ಸಂಬAಧಪಟ್ಟ ಹೆದ್ದಾರಿ ಇಲಾಖೆ ಉದ್ಯೋಗಿಗಳು ಎಚ್ಚೆತ್ತುಕೊಳ್ಳಲು ಸಾರ್ವಜನಿಕರು ಒತ್ತಾಯಿಸಿದ್ದಾರೆ.

You cannot copy contents of this page