ಅಂಗಡಿಮೊಗರು: ಅಂಗಡಿಮೊಗರು ಸೇವಾ ಸಹಕಾರಿ ಬ್ಯಾಂಕ್ನ ಮಹಾಸಭೆ ಇತೀಚೆಗೆ ಬ್ಯಾಂಕ್ ಹಾಲ್ನಲ್ಲಿ ಅಧ್ಯಕ್ಷ ರಾಮ್ ಭಟ್ರ ಅಧ್ಯಕ್ಷತೆಯಲ್ಲಿ ಜರಗಿತು. ಬ್ಯಾಂಕ್ 38 ಕೋಟಿ ರೂ. ಠೇವಣೆ, 35 ಕೋಟಿ ರೂ.ಸಾಲ ಹೊಂದಿದ್ದು 2025=26 ಆರ್ಥಿಕ ವರ್ಷದಲ್ಲಿ 25 ಲಕ್ಷ ರೂ. ಲಾಭವನ್ನು ಹೊಂದಿದೆ. ಬ್ಯಾಂಕ್ ಆರ್ಥಿಕ ವ್ಯವಹಾರದ ಹೊರತಾಗಿ ಕೃಷಿಕರಿಗೆ ಬೇಕಾದ ಜೈವ ಮತ್ತು ರಾಸಾಯನಿಕ ಗೊಬ್ಬರಗಳ ಡಿಪೋವನ್ನು ಹೊಂದಿದೆ. ಸಭೆಯಲ್ಲಿ ಬ್ಯಾಂಕ್ ನಿರ್ದೇಶಕರಾದ ಜಯಂತಿ, ವೇಣುಗೋಪಾಲ ರೈ, ಮೊಹಮ್ಮದ್ ಅನ್ಸಾರ್, ರಫೀಕ್ ಪಿ.ಎಂ, ನಫೀಸಾ, ದಾಮೋದರ ಶೆಟ್ಟಿ, ಭಾರತಿ .ಎಸ್ ಉಪಸ್ಥಿತರಿದ್ದರು. ನಿರ್ದೇಶಕ ಪಿ.ಬಿ ಮೊಹಮ್ಮದ್ ಸ್ವಾಗತಿಸಿ, ಬಷೀರ್ ಬಿ.ಎ ವಂದಿಸಿದರು. ಬ್ಯಾಂಕ್ ಕಾರ್ಯದರ್ಶಿ ವಿಠಲ್ ರೈ ವರದಿ ಮಂಡಿಸಿದರು.






