ನಿದ್ರೆಯಲ್ಲಿ ಹೃದಯಾಘಾತ ಯುವತಿ ಸಾವು

ಕಾಸರಗೋಡು: ನಿದ್ರೆಯಲ್ಲಿ ಹೃದಯಾಘಾತಕ್ಕೊಳಗಾಗಿ ಯುವತಿ ಸಾವನ್ನಪ್ಪಿದ ಘಟನೆ ನಡೆದಿದೆ. ನಗರದ ನೆಲ್ಲಿಕಂಜೆ ನಿವಾಸಿ ಕಾಸರಗೋಡು ನಗರಸಭೆಯ ಮಾಜಿ ಕೌನ್ಸಿಲರ್ ಸೈಬುನ್ನೀಸಾ-ಹನೀಫಾ ದಂಪತಿ ಪುತ್ರಿ ತನ್ಸಿಯಾ ಯಾನೆ ತನ್ಸೀರ ಸುಲ್ತಾನಾ (29) ಸಾವನ್ನಪ್ಪಿದ ಯುವತಿ. ಮಕ್ಕಳನ್ನು ಮದ್ರಸಾಕ್ಕೆ ಕಳುಹಿಸಲು ಮನೆಯ ವರು ನಿನ್ನೆ ಬೆಳಿಗ್ಗೆ   ತನ್ಸಿಯಾರನ್ನು ಕರೆದರೂ  ಏಳದಿರುವುದನ್ನು ಗಮನಿಸಿ ಮನೆಯವರು ತಕ್ಷಣ ವೈದ್ಯರನ್ನು ಮನೆಗೆ ಕರೆಸಿ ತಪಾಸಣೆ ನಡೆಸಿದಾಗ ತನ್ಸಿಯಾ ಸಾವನ್ನಪ್ಪಿರುವುದನ್ನು ಖಾತರಿಪಡಿಸಿದರು. ನಿದ್ರೆಯಲ್ಲೇ  ಹೃದಯಾಘಾತಕ್ಕೊಳಗಾಗಿ ಇವರು ಸಾವನ್ನಪ್ಪಿರಬಹುದೆಂದು ವೈದ್ಯರ ತಿಳಿಸಿದ್ದಾರೆ.

  ನಗರದ ಹೊಸ ಬಸ್ ನಿಲ್ದಾಣದಲ್ಲಿ ದೃಶ್ಯ ಮೊಬೈಲ್ ಶಾಪ್   ಮಾಲಕನಾಗಿರುವ ವಿದ್ಯಾನಗರ ನಿವಾಸಿ ಮನ್ಸೂರ್‌ರ ಪತ್ನಿಯಾದ ಮೃತರು ಮಕ್ಕಳಾದ ಮೊಯ್ದೀನ್, ಅಬ್ದುಲ್ ಖಾದರ್,  ಮರಿಯಾಂ ಸಿರ್ವ, ಇಲಾನಾ ಫಾತಿಮ, ಸಹೋದರಿಯರಾದ ನೆಯಿಮಾ ಪರ್ವೀನ್, ಫಾತಿಮತ್  ಸುಲ್ಫ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

You cannot copy contents of this page