ಕಾರು ಢಿಕ್ಕಿಹೊಡೆದು ಚಿಕಿತ್ಸೆಯಲ್ಲಿದ್ದ ಗೃಹಿಣಿ ಮೃತ್ಯು

ಕುಂಬಳೆ: ಕಾರು ಢಿಕ್ಕಿ ಹೊಡೆದು ಗಂಭೀರ ಗಾಯಗೊಂಡು ಚಿಕಿತ್ಸೆಯಲ್ಲಿದ್ದ ಗೃಹಿಣಿ ಮೃತಪಟ್ಟರು. ಇಚ್ಲಂಪಾಡಿ ಕಳ ತ್ತೂರು ನಿವಾಸಿ ಚನಿಯಪ್ಪ ಪೂಜಾರಿಯ ವರ ಪತ್ನಿ ಲಕ್ಷ್ಮಿ (69) ಮೃತಪಟ್ಟ ದುರ್ದೈವಿಯಾಗಿದ್ದಾರೆ. ಕಳೆದ ಅಗೋಸ್ತ್ ೧೪ರಂದು ಕುಂಬಳೆ ಪೇಟೆಯಲ್ಲಿ ಇವರಿಗೆ ಕಾರು ಢಿಕ್ಕಿ ಹೊಡೆದಿತ್ತು. ಇದರಿಂದ ಗಂಭೀರ ಗಾಯಗೊಂಡ ಇವರನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ಬಳಿಕ ಕುಂಬಳೆ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಬೆಳಿಗ್ಗೆ ನಿಧನ ಸಂಭವಿಸಿದೆ. ಮೃತರು ಮಕ್ಕಳಾದ ಮಾಲತಿ, ಕೃಷ್ಣ, ಕುಸುಮ, ಇಂದ್ರಾಣಿ, ಮಲ್ಲಿಕ, ಅಳಿಯಂದಿರಾದ ರಾಜು, ನವೀನ್, ಪ್ರವೀಣ್, ಸಹೋದರ-ಸಹೋದರಿಯರಾದ ಗೋಪಿ, ಬಾಬು ಪೂಜಾರಿ, ರಾಮ ಪೂಜಾರಿ,  ಸಂಜೀವ ಪೂಜಾರಿ ಹಾಗೂ ಅಪಾರ ಬಂಧು-ಮಿತ್ರರನ್ನು  ಅಗಲಿದ್ದಾರೆ. ಇನ್ನೋರ್ವ ಸಹೋದರ ಸೀನ ಪೂಜಾರಿ ಈ ಹಿಂದೆ ನಿಧನರಾಗಿದ್ದಾರೆ.

You cannot copy contents of this page