ಬದಿಯಡ್ಕ: ಕುಂಬ್ಡಾಜೆ ಗ್ರಾಮದ ತಲೆಬೈಲಿನಲ್ಲಿ ಹಣವಿರಿಸಿ ಕೋಳಿ ಅಂಕ ನಡೆಸುತ್ತಿದ್ದ ಕೇಂದ್ರಕ್ಕೆ ಬದಿಯಡ್ಕ ಪೊಲೀಸರು ನಿನ್ನೆ ದಾಳಿ ನಡೆಸಿ ಮೂವರನ್ನು ಬಂಧಿಸಿದ್ದಾರೆ. ಪೆರಡಾಲ ಮಾಡತ್ತಡ್ಕದ ಪ್ರಮೋದ್ (43) ಬದಿಯಡ್ಕ ವಿದ್ಯಾಗಿರಿ ಕಡಾರ್ನ ಜಗದೀಶ ಶೆಟ್ಟಿ (58), ನಾರಂಪಾಡಿ ನೆಲ್ಲಿಯಡ್ಕದ ಸುರೇಶ್ (23) ಎಂಬವರನ್ನು ಪೊಲೀಸರು ಸೆರೆ ಹಿಡಿದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕೋಳಿ ಅಂಕ ನಡೆಸುತ್ತಿದ್ದ ಕೇಂದ್ರದಿಂದ ಆರು ಕೋಳಿಗಳು ಹಾಗೂ 3200 ರೂ. ನಗದು ವಶಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.






