ಕುಂಬಳೆ: ಕುಂಬಳೆಯಲ್ಲಿ ಕೋಳಿ ಅಂಕ ನಿರತರಾಗಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಸ್ಥಳದಿಂದ ಐದು ಕೋಳಿಗಳನ್ನು ವಶಪಡಿಸಲಾಗಿದೆ. ಬಾಡೂರುಪದವು ನಿವಾಸಿ ಬಿ.ಕೆ. ಸೀತಾರಾಮ (46), ಕಿದೂರು ಶ್ರೀ ಮಹಾಲಿಂಗೇಶ್ವರ ಕ್ಷೇತ್ರ ಬಳಿಯ ಕಾಜೂರು ಹೌಸ್‌ನ ಕೆ. ದೀಕ್ಷಿತ್ (25) ಎಂಬಿವರನ್ನು ಕುಂಬಳೆ ಎಸ್‌ಐ ಸಂತೋಷ್ ವಟ್ಟಿಯಾಂವೀಟಿಲ್ ನೇತೃತ್ವದಲ್ಲಿ ಸೆರೆಹಿಡಿಯಲಾಗಿದೆ.







