ಬದಿಯಡ್ಕ: ಎದೆನೋವು ಕಂಡು ಬಂದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಿದ ವ್ಯಕ್ತಿ ಮೃತಪಟ್ಟರು. ಪಳ್ಳತ್ತಡ್ಕ ನಿವಾಸಿ ಬಾಲಕೃಷ್ಣ ನಾಯ್ಕ (54) ಮೃತಪಟ್ಟವರು. ತೆಂಗಿನಕಾಯಿ ಸುಲಿಯುವ ಕಾರ್ಮಿಕನಾಗಿದ್ದಾರೆ. ಮನೆ ಕೆಲಸದ ನಡುವೆ ಇವರಿಗೆ ಎದೆನೋವು ಕಂಡು ಬಂದಿದ್ದು, ಕೂಡಲೇ ಕಾಸರಗೋ ಡಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ನಿನ್ನೆ ಇವರು ಕೊನೆಯುಸಿರೆಳೆದರು.
ಮೃತರು ಪತ್ನಿ ಜಯಶ್ರೀ, ಮಕ್ಕಳಾದ ವಿಘ್ನೇಶ್ ಕುಮಾರ್, ಅಜಿತ್ ಕುಮಾರ್, ಸೊಸೆ ದಿವ್ಯ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.





