ಯುಡಿಎಫ್ ಅಧಿಕಾರಕ್ಕೇರಿದ ಬಳಿಕ  ಜನಜೀವನ ಅಸ್ತವ್ಯಸ್ಥ- ಡಿವೈಎಫ್‌ಐ

ಕಾಸರಗೋಡು: ರಾಜ್ಯದಲ್ಲಿ ಯುಡಿಎಫ್ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಜನಜೀವನ ಅಸ್ತವ್ಯಸ್ಥಗೊಂಡಿದೆಯೆಂದು ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ರತೀಶ್ ಎಂ.ವಿ ಆರೋಪಿಸಿದ್ದಾರೆ. ಸಿಪಿಎಂ ವಿಸ್ತರಣಾ ಜಿಲ್ಲಾ ಸಮಿತಿ ಅಂಗವಾಗಿ ಚೆಟ್ಟುಂಗುಳಿಯಲ್ಲಿ ನಡೆದ ಪಕ್ಷದ ರಾಮದಾಸನಗರ ಲೋಕಲ್ ಬಹುಜನ ಸಂಗಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಯುಡಿಎಫ್ ಸರಕಾರ ಅಧಿಕಾರಕ್ಕೇರಿದ ಬಳಿಕ ನಿತ್ಯೋಪಯೋಗಿ ಸಾಮಗ್ರಿಗಳ ಬೆಲೆ ಗಗನಕ್ಕೇರಿದೆ.

ವಿದ್ಯುತ್ ಕಡಿತದಿಂದ ಆಸ್ಪತ್ರೆಗಳು ಸಹಿತ ಎಲ್ಲಾ ವಲಯಕ್ಕೂ ಹೊಡೆತ ಬಿದ್ದಿದೆ. ಸರಕಾರಿ ಆಸ್ಪತ್ರೆಗಳಲ್ಲಿ ವೈದ್ಯರುಗಳ ಅಭಾವ ಹಾಗೂ ಔಷಧಿಗಳ ಕೊರತೆಯಿಂದ ರೋಗಿಗಳು ಪರದಾಡುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಹಲವು ಸಚಿವರು ವಿದೇಶ ಪ್ರವಾಸದಲ್ಲಿ ನಿರತರಾಗಿ ದ್ದಾರೆಂದು ರತೀಶ್ ಆರೋಪಿಸಿದ್ದಾರೆ.  ಸಿಪಿಎಂ ಲೋಕಲ್ ಸಮಿತಿ ಕಾರ್ಯದರ್ಶಿ ಕೆ. ಭುಜಂಗ ಶೆಟ್ಟಿ ಅಧ್ಯಕ್ಷತೆ ವಹಿಸಿದರು. ವಲಯ ಕಾರ್ಯದರ್ಶಿ ಟಿಎಂಎ ಕರೀಂ, ಸದಸ್ಯರಾದ ಎ. ರವೀಂದ್ರನ್, ಎಂ.ಕೆ. ರವೀಂದ್ರನ್, ಎಂ.ಅಶೋಕ ರೈ, ಮೊಹಮ್ಮದ್ ಕೆ ಮಾತನಾ ಡಿದರು. ಪಕ್ಷದ ಹಿರಿಯ ಸದಸ್ಯರನ್ನು ಶಾಲು ಹೊದಿಸಿ ಗೌರವಿಸಲಾಯಿತು. ಅಬ್ದುಲ್ ಜಲೀಲ್ ಸ್ವಾಗತಿಸಿ, ವಿಜಯಚಂದ್ರನ್ ವಂದಿಸಿದರು.

You cannot copy contents of this page