ಅಂಗನವಾಡಿ ನೌಕರರು ಭೂಮಿಯ ಮೇಲಿನ ದೇವತೆಗಳು-ಎಂ.ಎಲ್. ಅಶ್ವಿನಿ

ಮಂಜೇಶ್ವರ: ಅಂಗನವಾಡಿ ನೌಕರರು, ಆಶಾ ಕಾರ್ಯಕರ್ತೆಯರು ಮತ್ತು ಹಸಿರು ಕ್ರಿಯೆ ಸೇನೆ ಸದಸ್ಯೆ ಯರು ಭೂಮಿಯ ಮೇಲಿನ ದೇವತೆ ಗಳಾಗಿದ್ದು, ಅವರ ನಿಸ್ವಾರ್ಥ ಸೇವೆಗೆ ಇಡೀ ಸಮಾಜ ಋಣಿಯಾಗಬೇಕಿದೆ ಎಂದು ಬಿಜೆಪಿ ಜಿಲ್ಲಾ ಅಧ್ಯಕ್ಷೆ ಎಂ.ಎಲ್. ಅಶ್ವಿನಿ ಹೇಳಿದರು.
‘ಸೇವಾ ಸಂಕಲ್ಪ ಅಭಿಯಾನ’ದ ಭಾಗವಾಗಿ ಮೀಂಜ ಪಂಚಾಯತ್ ವ್ಯಾಪ್ತಿಯ ಕೋಳಿಯೂರು ಅಂಗನ ವಾಡಿಯಲ್ಲಿ ನಡೆದ ಸಮಾರಂಭದಲ್ಲಿ ೨೦೨೪-೨೫ನೇ ಸಾಲಿನ ಅತ್ಯುತ್ತಮ ಅಂಗನವಾಡಿ ಕಾರ್ಯಕರ್ತೆ ರಾಜ್ಯ ಪ್ರಶಸ್ತಿ ಪಡೆದ ಪಿ. ವಿಶಾಲಾಕ್ಷಿ ಅವರನ್ನು ಬಿಜೆಪಿ ಪರವಾಗಿ ಸನ್ಮಾನಿಸಿ ಅವರು ಮಾತ ನಾಡಿದರು. ಇದೇ ವೇಳೆ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯ ಕರ್ತೆಯರು ಹಾಗೂ ಹಸಿರು ಕ್ರಿಯಾ ಸೇನೆಯ ಸದಸ್ಯರನ್ನು ಗೌರವಿಸಲಾಯಿತು.
ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ್ ಬಿ.ಎಂ., ಪ್ರಧಾನ ಕಾರ್ಯದರ್ಶಿ ಯತಿರಾಜ್, ಕಾರ್ಯ ದರ್ಶಿ ಸಂತೋಷ್ ದೈಗೋಳಿ, ಮಹಿಳಾ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನಿತಾ ನಾಯಕ್, ಕಾರ್ಯದರ್ಶಿ ಮಮತಾ ಸಾಗರ್, ಮೀಂಜ ಪಂ. ಸಮಿತಿ ಅಧ್ಯಕ್ಷ ಚಂದ್ರಹಾಸ ಪೂಜಾರಿ, ಭಾಸ್ಕರ ಪೊಯ್ಯೆ, ರಕ್ಷನ್ ಅಡೆಕಳಕಟ್ಟೆ ಹಾಗೂ ವಾರ್ಡ್ ಜನಪ್ರತಿನಿಧಿ ಶಾಂತಕುಮಾರಿ ಮಾತನಾಡಿದರು.
ವರ್ಕಾಡಿ ಹಾಗೂ ಮೀಂಜ ಪಂ ಚಾಯತ್‌ಗಳ ವಿವಿಧ ಅಂಗನವಾಡಿ ಗಳಲ್ಲೂ ಇದೇ ರೀತಿಯ ಕಾರ್ಯ ಕ್ರಮಗಳನ್ನು ಆಯೋಜಿಸಲಾಗಿತ್ತು. ನರೇಂದ್ರ ಮೋದಿಯವರು ಗುಜರಾತ್ ಮುಖ್ಯಮಂತ್ರಿಯಾಗಿ ಮತ್ತು ಪ್ರಧಾನಿ ಯಾಗಿ ಸಾರ್ವಜನಿಕ ಸೇವೆಯಲ್ಲಿ ೨೫ ವರ್ಷಗಳನ್ನು ಪೂರೈಸುತ್ತಿರುವ ಸಂದರ್ಭದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಹಮ್ಮಿಕೊಳ್ಳಲಾಗಿರುವ ‘ಸೇವಾ ಸಂಕಲ್ಪ ಅಭಿಯಾನ’ದ ಭಾಗವಾಗಿ ವಿವಿಧ ಅಂಗನವಾಡಿ ಗಳಲ್ಲಿ ಕಾರ್ಯ ಕ್ರಮಗಳನ್ನು ಹಮ್ಮಿಕೊಳ್ಳಲಾಯಿತು.

You cannot copy contents of this page