ಕುಂಬಳೆ ಉಪಜಿಲ್ಲಾ ಶಾಲಾ ಕ್ರೀಡಾ ಕೂಟಕ್ಕೆ ಚಾಲನೆ

ಕುಂಬಳೆ: 68ನೇ  ಕುಂಬಳೆ ಉಪ ಜಿಲ್ಲಾ ಕ್ರೀಡಾ ಕೂಟಕ್ಕೆ ಕುಂಬಳೆ ಜಿಎಸ್‌ಬಿಎಸ್‌ನಲ್ಲಿ ಚಾಲನೆ ನೀಡಲಾ ಗಿದೆ. ಸ್ವಾಗತ ಸಮಿತಿ ಅಧ್ಯಕ್ಷ, ಕುಂಬಳೆ ಪಂಚಾಯತ್ ಅಧ್ಯಕ್ಷ ಬಿ.ಪಿ. ಅಬ್ದುಲ್ ಖಾದರ್ ಅಧ್ಯಕ್ಷತೆ ವಹಿಸಿದರು. ಕಾಸರಗೋಡು ಎಸಿಪಿ ಅಚ್ಯುತ್ ಅಶೋಕ್ ವಂದನೆ ಸ್ವೀಕರಿಸಿದರು. ಉಪಜಿಲ್ಲಾ ಶಿಕ್ಷಣ ಉಪ ನಿರ್ದೇಶಕ ಅಶೋಕ್ ಧ್ವಜಾರೋಹಣಗೈದರು. ಕಾಸರಗೋಡು ಬ್ಲೋಕ್ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ಅಶ್ರಫ್ ಕಾರ್ಲೆ, ಜಿಲ್ಲಾ ಪಂಚಾಯತ್ ಸದಸ್ಯ ಅಸೀಸ್ ಕಳತ್ತೂರು, ಕುಂಬಳೆ ಸಿಐ ಅನೂಪ್ ಕೃಷ್ಣ, ಸ್ವಾಗತ ಸಮಿತಿ ಪದಾಧಿಕಾರಿಗಳಾದ ಎ.ಕೆ. ಆರೀಫ್, ಎಂ.ಪಿ. ಖಾಲಿದ್, ಮಂಜುನಾಥ ಆಳ್ವ, ಇನಾಸ್ ಫವಾಸ್, ಬ್ಲೋಕ್ ಪಂ. ಸದಸ್ಯರಾದ ಪೃಥ್ವಿರಾಜ್ ಶೆಟ್ಟಿ, ಸೋಯಾ ಲತೀಫ್, ರಮೇಶ್ ಭಟ್, ಎಚ್.ಎಂ. ವಿಜಯ ಕುಮಾರ್ ಮಾತನಾಡಿದರು.

You cannot copy contents of this page