ಲೈಂಗಿಕ ದೌರ್ಜನ್ಯಕ್ಕೀಡಾದ ಯುವತಿಯಿಂದ ಮಗುವಿಗೆ ಜನ್ಮ: ಆರೋಪಿ ಪತ್ತೆಗಾಗಿ ಶೋಧ

ಮಂಜೇಶ್ವರ: ಲೈಂಗಿಕ ದೌರ್ಜನ್ಯ ಕ್ಕೀಡಾದ ಯುವತಿ ಮಗುವಿಗೆ ಜನ್ಮ ನೀಡಿದಳು.  ಈ ಹಿನ್ನೆಲೆಯಲ್ಲಿ 40ರ ಹರೆಯದ ಚಂದ್ರು ಎಂಬಾತನ ವಿರುದ್ಧ ಮಂಜೇಶ್ವರ ಪೊಲೀಸರು ದೌರ್ಜನ್ಯ ಪ್ರಕರಣ ದಾಖಲಿಸಿಕೊಂಡಿದ್ದಾರೆ.  ಆರೋಪಿಗಾಗಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸಿಸುವ 21ರ ಹರೆಯದ ಯುವತಿ  ಲೈಂಗಿಕ ದೌರ್ಜನ್ಯಕ್ಕೊಳಗಿದ್ದಳು.  ಆದರೆ  ಭಯ ದಿಂದ ಯುವತಿ ಈ ವಿಷಯವನ್ನು ಯಾರಲ್ಲೂ ತಿಳಿಸಿರಲಿಲ್ಲ. ತುಂಬು ಗರ್ಭಿಣಿಯಾದ ಯುವತಿ ಮಗುವಿಗೆ ಜನ್ಮ ನೀಡಿದ್ದಾಳೆ. ಆಸ್ಪತ್ರೆ ಅಧಿಕಾರಿಗಳು ನೀಡಿದ ಮಾಹಿತಿ ಪ್ರಕಾರ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಆದರೆ ಮಗು ತನ್ನದಲ್ಲವೆಂದು ಯುವಕ ತಿಳಿಸುತ್ತಿದ್ದಾನೆನ್ನಲಾಗಿದೆ. ಆದ್ದರಿಂದ ಆರೋಪಿಯನ್ನು ಬಂಧಿಸಿ ಡಿಎನ್‌ಎ ತಪಾಸಣೆ ನಡೆಸಲು ಪೊಲೀಸರು ಕ್ರಮ ಕೈಗೊಂಡಿದ್ದಾರೆ.

You cannot copy contents of this page