ಮಂಜೇಶ್ವರ: ಬಂಗ್ರ ಮಂಜೇಶ್ವರ ಕೋಟಗಂ ತರವಾಡು ಬಳಿಯ ನಿವಾಸಿ, ಸೆಂಟ್ರಿAಗ್ ಕಾರ್ಮಿಕ ಕೇಶವ (63) ಎಂಬವರ ಮೃತದೇಹ ಮನೆ ಬಳಿಯ ಬಾವಿಯ ಕಂಬಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಭಾನುವಾರ ಬೆಳಿಗ್ಗೆ ಮನೆಯಿಂದ ಹೊರಗಡೆ ಹೋದ ಇವರು ಬಳಿಕ ಮರಳದೆ ನಾಪತ್ತೆಯಾಗಿದ್ದರು. ನಿನ್ನೆ ಬೆಳಿಗ್ಗೆ ಸುಮಾರು 10ಗಂಟೆ ವೇಳೆ ಸಂಬAಧಿಕೆಯಾದ ಮಹಿಳೆ ಈ ದಾರಿಯಗಿ ಮನೆಗೆ ತೆರಳುವ ವೇಳೆ ಬಾವಿಯ ಕಟ್ಟೆಯಲ್ಲಿ ಮೊಬೈಲ್ ಕಂಡು ಬಂದಿದ್ದು, ಅದನ್ನು ನೋಡಲೆಂದು ಬಾವಿಯ ಬಳಿ ಹೋದ ವೇಳೆ ಮೃತದೇಹ ಪತ್ತೆಯಾಗಿದೆ.
ಎರಡು ದಿನಗಳ ಹಿಂದೆ ಮೃತಪಟ್ಟಿರ ಬಹುದೆಂದು ಅಂದಾಜಿಸಲಾಗಿದೆ. ಉಪ್ಪಳದಿಂದ ಅಗ್ನಿಶಾಮಕ ದಳ ತಲುಪಿ ಮೃತದೇಹವನ್ನು ಮೇಲಕ್ಕೆತ್ತಿ ದ್ದಾರೆ. ಮಂಜೇಶ್ವರ ಪೊಲೀಸರು ತಲುಪಿ ಪಂಚೆನಾಮೆ ನಡೆಸಿ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಬಳಿಕ ಚೆರುಗೋಳಿ ಹಿಂದೂ ರುದ್ರಭೂಮಿಯಲ್ಲಿ ಅಂತ್ಯಸAಸ್ಕಾರ ನಡೆಯಿತು. ಮೃತರು ಪತ್ನಿ ಮಂಜುಳ, ಮಕ್ಕಳಾದ ಚಿತೈಷ್ ಕುಮಾರ್, ನಿದೀಶ್, ತೇಜಸ್ವಿನಿ, ಸಹೋದರ ವಿಶ್ವನಾಥ, ಸಹೋದರಿ ಯರಾದ ಶಶಿಕಲಾ, ಶಕುಂತಳ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.






