ವ್ಯಾಪಾರಿ ನಿಧನ

 
ಕಾಸರಗೋಡು: ಬೇಳ ಚಿಮ್ಮಿನಿಯ ಡ್ಕದ ವ್ಯಾಪಾರಿ ಹೃದಯಾಘಾತದಿಂದ ನಿಧನ ಹೊಂದಿದರು. ಚಿಮ್ಮಿನಿಯಡ್ಕ ಜುಮಾ ಮಸೀದಿ ಸಮೀಪದಲ್ಲಿ ದಿನಸಿ ವ್ಯಾಪಾರ ಮಾಡುತ್ತಿದ್ದ ಅಬೂಬಕ್ಕರ್ (೬೦) ಮೃತಪಟ್ಟವರು. ಅಂಗಡಿಯಲ್ಲಿ ಎದೆ ನೋವು ಕಂಡುಬಂದ ಹಿನ್ನೆಲೆಯಲ್ಲಿ ಕಾಸರಗೋಡು ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ. ಮೃತರು ಪತ್ನಿ ಸುಹರ, ಮಕ್ಕಳಾದ ಸೆಫೀಕ್, ಸೆಮೀರ್, ಪಾವಸ್, ಅಳಿಯ ಶೆರೀನ್, ಸಹೋದರರಾದ ಮುಹಮ್ಮದ್, ಆದಂಕುಂಞಿ, ಮೊದೀನ್ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ

RELATED NEWS

You cannot copy contents of this page