ಮಾರ್ಪನಡ್ಕ: ಏತಡ್ಕ ನಿವಾಸಿ ಅಬುದಾಬಿಯಲ್ಲಿ ಕುಸಿದುಬಿದ್ದು ಮೃತಪಟ್ಟರು. ಏತಡ್ಕ ಸಮೀಪದ ನೀರಡ್ಕ ಮೊಹಮ್ಮದ್‌ಕುಂಞಿ-ಆಯಿಷ ದಂಪತಿ ಪುತ್ರ ಮೊದೀನ್‌ಕುಂಞಿ (56) ಮೃತಪಟ್ಟವರು. ವಾಸ ಸ್ಥಳದಲ್ಲಿ ಹೃದಯಾಘಾತ ಉಂಟಾದ ಹಿನ್ನೆಲೆಯಲ್ಲಿ ಅಲ್ಲಿನ ಆಸ್ಪತ್ರೆಗೆ ತಲುಪಿಸಲಾಯಿತಾದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ. ಮೃತದೇಹವನ್ನು ಊರಿಗೆ ತರಲಿರುವ ಪ್ರಯತ್ನ ಆರಂಭಿಸಲಾಗಿದೆ. ಮೃತರು ತಂದೆ, ತಾಯಿ, ಪತ್ನಿ ಸಫಿಯಾ, ಮಕ್ಕಳಾದ ಮೊಹಮ್ಮದ್ ಮುಫೀದ್, ಮುಹ್‌ಯುದ್ದೀನ್, ಮುರ್ಷಿದಲಿ, ಅಹಮ್ಮದ್ ಮಿಸಿಯಾನ್, ಸಹೋದರ ಅಬ್ದುಲ್ಲ, ಸಹೋದರಿಯರಾದ ಬೀಫಾತಿಮ್ಮ, ಮರಿಯುಮ್ಮ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರ.







