ಕುಂಬಳೆ ಉಪಜಿಲ್ಲಾ ಶಾಲಾ ಕಲೋತ್ಸವ ವೇದಿಕೆ ಸ್ಪರ್ಧೆಗಳು ನ.2ರಿಂದ

ಬದಿಯಡ್ಕ: ಪೆರಡಾಲ ನವ ಜೀವನ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಿನ್ನೆ ಆರಂಭಗೊಂಡ ಕುಂಬಳೆ ಉಪಜಿಲ್ಲಾ ಶಾಲಾ ಕಲೋತ್ಸವದ ವೇದಿಕೇತರ ಸ್ಪರ್ಧೆಗಳು ಇಂದು ಕೊನೆಗೊಳ್ಳಲಿದೆ. ವೇದಿಕೆ ಸ್ಪರ್ಧೆಗಳು ನವೆಂಬರ್ 2ರಿಂದ 4ರವರೆಗೆ ನಡೆಯಲಿದೆ. ಇದರಲ್ಲಿ ಉಪಜಿಲ್ಲೆಯ 94 ಶಾಲೆಗಳಿಂದ ವಿದ್ಯಾರ್ಥಿ- ವಿದ್ಯಾರ್ಥಿನಿಯರು ಭಾಗವಹಿಸುವರು. ನವೆಂಬರ್ 2ರಂದು ಸಂಜೆ 4ಕ್ಕೆ ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಕಲೋತ್ಸವ ಉದ್ಘಾಟನೆ ನೆರವೇರಿಸು ವರು. ಕಲೋತ್ಸವದ ವೆಚ್ಚ ಕಡಿಮೆ ಮಾಡಲು ಹಾಗೂ ಪರಿಸರಸ್ನೇಹಿ ರೀತಿ ಯಲ್ಲಿ ಉತ್ಸವ ನಡೆಸಲು ಸಂಘಟನಾ ಸಮಿತಿಯ ನೇತೃತ್ವದಲ್ಲಿ ವಿವಿಧ ಚಟು ವಟಿಕೆ ಹಮ್ಮಿಕೊಳ್ಳಲಾಗಿದೆ. ಇದರ ಪೂರ್ವಭಾವಿಯಾಗಿ ಪಂಚಾಯತ್ ಅಧ್ಯಕ್ಷ ಡಿ. ಶಂಕರ್ ಹಾಗೂ ಸದಸ್ಯರು ತೆಂಗಿನಗರಿ ಹೆಣೆಯುವ ಕಾರ್ಯಕ್ಕೆ ಇತ್ತೀಚೆಗೆ ಚಾಲನೆ ನೀಡಿದರು. ಕಲೋ ತ್ಸವದ ಭಾಗವಾಗಿ ಪರಿಸರ ಕಾಳಜಿ ಮೆರೆಯಲು ತೆಂಗಿನ ಗರಿಗಳಿಂದ ಮಾಡಿದ ಸೂಚನಾ ಫಲಕಗಳು ಹಾಗೂ ಗರಿಗಳ ಬುಟ್ಟಿಗಳನ್ನು ಸಿದ್ಧಪಡಿಸಲಾಗುತ್ತಿದೆ.

You cannot copy contents of this page