ಬೆಂಗಳೂರು: ಕನ್ನಡ ಸಿನಿಮಾರಂಗ ದಲ್ಲಿ ಹೊಸ ಅಲೆ ಸೃಷ್ಟಿಸಿದ್ದ ನಟ ಉಪೇಂದ್ರ ಅವರನ್ನು ಸೂಪರ್ ಸ್ಟಾರ್ ಪದವಿಗೇರಿಸಿದ ‘ಎ’ ಸಿನಿಮಾ ನಿರ್ಮಾಪಕರಾಗಿದ್ದ ಬಿ.ಜಿ. ಮಂಜುನಾಥ್ (69) ನಿಧನ ಹೊಂದಿದರು. ಸಿಲ್ಕ್ ಮಂಜು ಎಂದೇ ಕರೆಯಲ್ಪಡುತ್ತಿದ್ದ ಇವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿನ್ನೆ ಕೊನೆಯುಸಿರೆಳೆದಿದ್ದಾರೆ. ‘ಎ’ ಸಿನಿಮಾದ ಹೆಚ್ಚಿನ ಭಾಗಗಳನ್ನು ಬೇಕಲಕೋಟೆ ಹಾಗೂ ಚಂದ್ರಗಿರಿ ಪರಿಸರದಲ್ಲಿ ಚಿತ್ರೀಕರಿಸ ಲಾಗಿತ್ತು. ಚಳಿಯಂಗೋಡ್‌ನಲ್ಲಿ ಇದರಲ್ಲಿನ ಹಾಡೊಂದನ್ನು ಚಿತ್ರೀಕರಿಸ ಲಾಗಿತ್ತು. ಈ ವೇಳೆ ಮಂಜು ಬೇಕಲಕೋ ಟೆಗೆ ತಲುಪಿದ್ದರು. ೧೯೯೮ರಲ್ಲಿ ತೆರೆಕಂಡ ‘ಎ’ ಸಿನಿಮಾ ನಿರ್ಮಾಣದ ಮೂಲಕ ಇವರು ಸಿನಿಮಾ ಉದ್ಯಮಕ್ಕೆ ಕಾಲಿರಿಸಿದ್ದರು.






